ದಿನದ ಸುದ್ದಿ

ಗತವೈಭವ ವಾರ್ಷಿಕ ಸಾಧಕ ಪ್ರಶಸ್ತಿಗೆ ಕೃತಿಗಳ ಅಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿ (ರಿ) ದಾವಣಗೆರೆ ವತಿಯಿಂದ ರಾಜ್ಯದ ವಿವಿಧ ಲೇಖಕರಿಂದ ಕಥಾಸಂಕಲನ ಮತ್ತು ಕಾದಂಬರಿ ಸಾಹಿತ್ಯ ಕೃತಿಗಳಿಗೆ ಪ್ರತಿಷ್ಠಿತ ಆಝಾದ್ ಕಥಾ ಸಾಧಕ ಮತ್ತು ಗತವೈಭವ ವಾರ್ಷಿಕ ಸಾಧಕ ಪ್ರಶಸ್ತಿಗೆ ಅರ್ಜಿ ಅಹ್ವಾನ ಮಾಡಲಾಗಿದೆ.

ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡಿದ ಒಂದೊಂದು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಸಕ್ತರು 2022-23ನೆಯ ಸಾಲಿನಲ್ಲಿ ಪ್ರಕಟವಾಗಿರುವ ಕಥಾಸಂಕಲನ ಮತ್ತು ಕಾದಂಬರಿಯ ಎರಡು ಪ್ರತಿಗಳ ಜೊತೆ ತಮ್ಮ ಪರಿಚಯ ಪತ್ರದೊಂದಿಗೆ ಫೆಬ್ರವರಿ 20 ರೊಳಗೆ ಅಧ್ಯಕ್ಷರು ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿ (ರಿ) ನವಿಲೇಹಾಳ್, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ -577544.

ಸಂಚಾರಿ : 9743930178ಈ ವಿಳಾಸಕ್ಕೆ ಕಳುಹಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ : ಅಂಚೆ (Speed post. Register post) ಮೂಲಕ ಕೃತಿಗಳನ್ನು ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು. 97439 30178, 9535104785, 9164827122, 9741270125.

Trending

Exit mobile version