ದಿನದ ಸುದ್ದಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ : ಎಸ್ ಐ ಟಿಗೆ ಬಹುಮಾನ ನೀಡಲು ಮನವಿ

Published

on

ಸುದ್ದಿದಿನ, ಬೆಂಗಳೂರು : ಸೆಪ್ಟೆಂಬರ್ 5, 2017 ರಂದು ಮಸುಕುಧಾರಿಾಯೊಬ್ಬ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ಹತ್ಯೆ ಗೆ ಸಂಭವಿಸಿದಂತೆ ಚುರುಕಾಗಿ ತನಿಖೆ ನಡೆಸಿದ್ದ ಎಸ್ ಐ ಟಿ ತಂಡಕ್ಕೆ ಬಹುಮಾನವನ್ನು ನೀಡುವಂತೆ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

ಎಸ್ ಐ ಟಿಯ ಮುಖ್ಯಸ್ಥರೊಬ್ಬರು 25 ಲಕ್ಷ ರೂ ಬಹುಮಾನ ಘೋಷಿಸುವಂತೆ ಗೃಹ ಇಲಾಖೆಗೆ ಪತ್ರ ಬರೆದಿದು ಮನವಿ ಮಾಡಿದ್ದಾರೆ. ‘ರಜನೀಶ್ ಗೋಯಲ್’ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಇವರಿಗೆ ಎಸ್ ಐ ಟಿಯ ಮುಖ್ಯಸ್ಥರು ಪತ್ರ ಬರೆದಿದ್ದು, ” ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಎಸ್ ಐ ಟಿ ಯು ಮಾತ್ರ ತನಿಖೆಯನ್ನು ಮಾಡಿದೆ. ಈ ತನಿಖೆಯಿಂದಾಗಿ ಇತರ ವಿಚಾರವಾದಿಗಳ ಹತ್ಯೆಯ ತನಿಖೆ್ಗೂಗೂ ಇದು ನಾದಿಯಾಗಿದೆ. ಗೌರಿ ಲಂಕೇಶ್ ಹತ್ಯೆಯ ತನಿಖೆಯು ಒಂದು ವರ್ಷದ ಕಠಿಣ ಶ್ರಮದಿಂದ ಆಗಿದೆ ಎಂದು” ಉಲ್ಲೇಖಿಸಿದ್ದಾರೆ.

ಏಪ್ರಿಲ್ 12 ನೇ ತಾರೀಖು ಎಸ್ ಐ ಟಿ ತಂಡಕ್ಕೆ ಬಹುಮಾನ ನೀಡುವಮನತೆ ಕೋರಿ ಪತ್ರ ಬರೆಯಲಾಗಿದೆ. ಈ ಪತ್ರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖಾ ತಂಡದ ನೇತ್ಋತ್ವವನ್ನು ವಹಿಸಿದ್ದ, ಐಜಿಪಿ ಬಿ.ಕೆ.ಸಿಂಗ್, ಎಸ್ ಪಿ ಗಳಾದ ಹರೀಶ್, ಎಂ.ಎನ್.ಅನುಚೇತ್, ಡಿವೈಎಸ್ಪಿ ಗಳಾದ ಎನ್.ಬಿ. ಸಖ್ರಿ, ರಂಗಪ್ಪ, ಜಗನ್ನಾಥ ರೈ ಹಾಗೆ 13 ಇನ್ಸ್‌ಪೆಕ್ಟರ್ ಗಳ ಶ್ರಮದ ಬಗ್ಗೆಯೂ ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version