ದಿನದ ಸುದ್ದಿ
ಗೌರಿ ಹತ್ಯೆ ಪ್ರಕರಣ : ಮಹಾರಾಷ್ಟ್ರ ಮೂಲದ ಮತ್ತೊಬ್ಬ ಆರೋಪಿ ಬಂಧನ
ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಮಹರಾಷ್ಟ್ರದ ಸತರಾ ಮೂಲದ ಆರೋಪಿ ಸುಧಾನ್ವ ಗೊಂಧಲೇಕರ್ ಎಂಬಾತನನ್ನು ATS ಬಂಧಿಸಿದೆ. ನಂತರ ಕೋಕಾ ವಿಶೇಷ ನ್ಯಾಯಲಯಕ್ಕೆ ಹಾಜರುಪಡಿಸಿ 14 ದಿನ ವಶಕ್ಕೆ ಪಡೆದಿದೆ SIT.
ಆರೋಪಿ ಸುಧ್ವಾನ್ ಗೊಂದಲೇಕರ್
ಗೌರಿ ಹತ್ಯೆ ಬಳಿಕ ಹತ್ತು ದಿನಗಳ ನಂತರ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದು ಹತ್ಯೆ ಪಿಸ್ತೂಲ್ ಪಡೆದು ತೆರಳಿದ ಸುಧ್ವಾನ್ ಗೊಂಧಲೇಕರ್ ಹೆಚ್ ಎಲ್ ಸುರೇಶ್ ಸಿಂಗೇಹಳ್ಳಿ ಮನೆಯಿಂದ ಅಮೋಲೆ ಕಾಳೆ ಯಿಂದ ಪಿಸ್ತೂಲ್ ಪಡೆದು ಕರ್ನಾಟಕದ ಗಡಿ ಭಾಗ ದಾಟಿಸಿದ್ದ. ಕರ್ನಾಟಕದ SIT ನೀಡಿದ ಮಹಿತಿ ಮೇರೆಗೆ ಮಹಾರಾಷ್ಟ್ರದ ಸತಾರ ದಲ್ಲಿ ATS ದಾಳಿ ನಡೆಸಿ ಆಗಸ್ಟ್ 10 ರಂದು ಸುದ್ವಾನ್ ನನ್ನು ಬಂಧಿಸಿದ್ದು, ಈತನಿಂದ ATS CBI ಜಂಟಿ ಕಾರ್ಯಚಾರಣೆ ವೇಳೆ 16 ಕಂಟ್ರಿ ಮೇಡ್ ಪಿಸ್ತೂಲ್, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದವು ಈ ಎರಡು ತನಿಖಾ ಸಂಸ್ಥೆಗಳು. ಪಿಸ್ತೂಲ್ ರವಾನೆ ಆರೋಪದ ಮೇಲೆ ಸುದ್ವಾನ್ ಗೋಂಧಲೇಕರ್ ನ್ನು ವಶಕ್ಕೆ ಪಡೆದಿದೆ SIT.
ಸುದ್ದಿದಿನ.ಕಾಂ|ವಾಟ್ಸಾಪ್|9986715401