ದಿನದ ಸುದ್ದಿ
ಚನ್ಮಗಿರಿ | ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಸುದ್ದಿದಿನ, ಚನ್ನಗಿರಿ : ಮಹಿಳೆಯರಿಗೆ ಮೀಸಲಾತಿ ನೀಡಿದ್ದರಿಂದ ಸ್ಥಳೀಯ ರಾಜಕೀಯದಲ್ಲಿ ಪಾಲ್ಗೊಂಡು ಮುಖ್ಯ ವಾಹಿನಿಗೆ ಬರಲು ಅವಕಾಶವಾಗಿದೆ ಎಂದು ಮಂಜುಳಾ ಟಿ.ವಿ.ರಾಜು. ಮಾ.ಜಿ.ಪಂ.ಅಧ್ಯಕ್ಷರು ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಗೌರಮ್ಮ ಡಿ ಏನ್ ಸಹಾಯಕ ಪ್ರಾಧ್ಯಾಪಕರು ಸಮಾಜಶಾಸ್ತ್ರ ವಿಭಾಗ ಇವರು ಮಾತನಾಡಿ ಹಿಂದೂ ವಿವಾಹ ಕಾಯಿದೆಯಿಂದ ಮಹಿಳೆಯರಿಗೆ ಸ್ವತಂತ್ರ ದೊರೆಯಿತು.1956 ರಲ್ಲಿ ಮಹಿಳೆಯರ ವ್ಯಾಪಾರ ಪ್ರತಿಬಂಧಕ ಕಾಯಿದೆ ಮೂಲಕ ಮಹಿಳೆಯರಿಗೆ ರಕ್ಷಣೆ ದೊರಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೆಜಿನ ಪ್ರಾಂಶುಪಾಲರು ಹಾಲಸಿದ್ದಪ್ಪ ಅವರು ವಹಿಸಿದ್ದರು.ಪ್ರಾಧ್ಯಾಪಕಿ ಮಾನಸ ಸ್ವಾಗತಿಸಿದರು ಹಾಗೂ ಡಾ ಸುನೀತ ನಿರೂಪಿಸಿದರು. ಅಬೀದಾ ಸಲ್ಮಾ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243