ದಿನದ ಸುದ್ದಿ

ಮುಂದಿನ ನಾಯಕರಾಗಿ ತಯಾರಾಗಿ : ಪ್ರೊ ಇಗ್ನಿಸಿಯಸ್

Published

on

ಸುದ್ದಿದಿನ,ದಾವಣಗೆರೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ “ಫ್ರೆಷರ್ಸ್ ಫಿಯೆಸ್ಟಾ – 2K25” ಕಾರ್ಯಕ್ರಮವು ಮಹಾ ಸಡಗರದಿಂದ ನಡೆಯಿತು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಸವರಾಜ ಸಿ. ತಹಸಿಲ್ದಾರ್ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಪ್ರೊ. ಬಸವರಾಜ ಸಿ. ತಹಸಿಲ್ದಾರ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಕಟ್ಟುವಲ್ಲಿ ಪ್ರಾರಂಭಿಕ ದಿನಗಳ ಮಹತ್ವ ಕುರಿತು ವಿವರಿಸಿದರು. ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, ಶಿಕ್ಷಣವು ಜೀವನ ರೂಪಿಸುವ ಪ್ರಮುಖ ಅಂಶವಾಗಿದ್ದು, ಅವರ ಶೈಕ್ಷಣಿಕ ಪಯಣ ಸದೃಢವಾಗಿರಬೇಕೆಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಇಗ್ನೇಷಿಯಸ್. ಬಿ., ಪ್ರಾಂಶುಪಾಲರು, RVD ಕಾಲೇಜು, ಬೆಂಗಳೂರು, ಅವರು “ವಿದ್ಯಾರ್ಥಿಗಳು ಮುಂದಿನ ನಾಯಕರು” ಎಂಬ ವಿಷಯದ ಮೇಲೆ ಪ್ರೇರಣಾತ್ಮಕ ಭಾಷಣವನ್ನು ನೀಡಿದರು. ವಿದ್ಯಾರ್ಥಿಗಳು ಕೇವಲ ಅಧ್ಯಯನದಲ್ಲಿ ಮಾತ್ರವಲ್ಲ, ನೈತಿಕ ಮತ್ತು ವ್ಯಕ್ತಿತ್ವ ಅಭಿವೃದ್ಧಿಯಲ್ಲಿಯೂ ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದರು. ತಾಂತ್ರಿಕ ಜ್ಞಾನ, ನಿರ್ಧಾರಕ್ಷಮತೆ ಮತ್ತು ತಂಡದ ಮನೋಭಾವ ಇಂದಿನ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವೆಂದು ಅವರು ಒತ್ತಿಹೇಳಿದರು.

ಪ್ರಪಂಚದ ಮುಂದಿನ 40 ವರ್ಷಗಳು ನಿರ್ವಹಣಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ವರ್ಷಗಳು ಯಾವುದೇ ವಿಷಯಕ್ಕೆ ಬೇಡಿಕೆ ಕಡಿಮೆಯಾದರೂ ನಿರ್ವಹಣ ಶಾಸ್ತ್ರಕ್ಕೆ ತೊಂದರೆ ಆಗದು ಇತ್ತೀಚಿನ. ಎ ಐ ತಂತ್ರಜ್ಞಾನ ಕಲಿತರೆ ವಿದ್ಯಾರ್ಥಿಗಳು ವಾಣಿಜ್ಯ ಪ್ರಪಂಚವನ್ನು ಆಳಬಹುದು ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಡಾ. ವೆಂಕಟೇಶ್ ಬಾಬು. ಎಸ್., ನಿರ್ವಹಣಾ ವಿಭಾಗದ ಮುಖ್ಯಸ್ಥರು, ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಮಾಡಿದರು. ಅವರು ವಿಭಾಗದ ಶೈಕ್ಷಣಿಕ ಕಾರ್ಯಕ್ರಮಗಳು, ಶಿಷ್ಯತ್ವ ಮತ್ತು ಕೈಗಾರಿಕಾ ಸಂಪರ್ಕದ ಮಹತ್ವ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ವ್ಯಕ್ತಿತ್ವ ವೃದ್ಧಿಸಲು ಮತ್ತು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಮುನ್ನಡೆಯಬೇಕು ಎಂದು ಹೇಳಿದರು. ಬಾಯ್ ಶಾಸ್ತ್ರ ಮತ್ತು ವಿದ್ಯಾರ್ಥಿಗಳಿಗೆ ಯಾವತ್ತಿಗೂ ಭವಿಷ್ಯವಿದೆ ಪ್ರಪಂಚದಲ್ಲಿ ವಾಣಿಜ್ಯ ವ್ಯವಹಾರ ಇರುವರೆಗೂ ನಿಮಗೆ ಅವಕಾಶಗಳು ಕಡಿಮೆ ಆಗುತ್ತಿಲ್ಲ ಆದರೆ ಒಂದಿಷ್ಟು ಮೌಲ್ಯ ಆಧಾರಿತ ಶಿಕ್ಷಣವನ್ನು ಪಡೆದುಕೊಂಡರೆ ನೀವು ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸುರೇಶ್ ಅವರು ಮಾತನಾಡುತ್ತಾ ಕಾಲೇಜಿನಲ್ಲಿ ಇತರದ ಕಾರ್ಯಕ್ರಮಗಳು ಸದಾ ನಡಿಯುತ್ತಿರುತ್ತವೆ. ಅವುಗಳ ಉಪಯೋಗವನ್ನು ಪಡೆದುಕೊಂಡರೆ ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಾಲೇಜಿನ ಅಧೀಕ್ಷಕರಾದ ಆತ್ಮಹತ್ಯೆ ಪ್ರತಿಭಾ ಹಾಗೂ ಶ್ರೀ ಕುಮಾರ ಜಮುನಾ ಮತ್ತು ನಿರ್ಣಯಶಾಸ್ತ್ರ ಭಾಗದ ಉಪನ್ಯಾಸಕರಾದ ಶ್ರೀಮತಿ ಪ್ರತಿಭಾ ಶ್ರೀಮತಿ ರಾಧಾ ಹಾಗೂ ಶ್ರೀಮತಿ ಡಾ ಸೌಜನ್ಯವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ರಾಂಕ್ ವಿಜೇತರಿಗೆ ಸನ್ಮಾನಿಸಲಾಯಿತು. ನಿರ್ವಹಣ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ ವಿನಾಯಕ್ ದಾ ಪ್ರಭಾಕರ್ ಪ್ರೊ ವೀರೇಶ್ ಪ್ರೊ ಶಂಕರಯ್ಯ ಮತ್ತು ಪ್ರೊ ನಾಗರಾಜ ಹಾಗೂ ಹಲವಾರು ಪ್ರಾಧ್ಯಾಪಕರು ಹಾಜರಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version