ದಿನದ ಸುದ್ದಿ
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ
ಸುದ್ದಿದಿನ ,ದಾವಣಗೆರೆ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ಸ್ವಾಪ್ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲರಾದ ಡಾ.ಆರ್ ಅಂಜಿನಪ್ಪನವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಅದರ ಲಾಲನೆ ಪೋಷಣೆ ಮಾಡಿದರೆ ನಿಸರ್ಗದಲ್ಲಿ ಆಗುವ ಏರುಪೇರುಗಳನ್ನು ತಡೆಗಟ್ಟಿ ಅನಾಹುತವನ್ನು ತಡೆಗಟ್ಟಬಹುದು ಎಂದು ಕರೆ ನೀಡಿದರು.
ಇದೇ ವೇಳೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರುಗಳಾದ ಅದಿತಿ ಯು, ರಂಜಿತಾ ಎಲ್, ಅಕ್ಷಯ್ ಎಂ ,ಅಮೃತ ಟಿ, ರಮ್ಯ ಜಿ.ಎಂ, ಮೈನಾ ಹೆಚ್. ಎಸ್, ಸುದೀಪ್ ಎಸ್, ಭೀಮ ನಾಯ್ಕ್, ಅವರು ಸಸಿಗಳನ್ನು ದತ್ತು ತೆಗದುಕೊಳ್ಳುವ ಮೂಲಕ ಅವುಗಳನ್ನು ಬೆಳೆಸಿ, ಉಳಿಸಿ,ಪೋಷಣೆ ಮಾಡಿ ಸಂರಕ್ಷಿಸುವ ಜವಾಬ್ದಾರಿಯನ್ನು ತಗೆದುಕೊಳ್ಳುವ ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ಪ್ರೊ. ಭೀಮಣ್ಣ. ಸುಣಗಾರ, ಪ್ರೊ. ಗಿರಿಸ್ವಾಮಿ, ಪ್ರೊ. ಗುರುದೇವ, ಪ್ರೊ.ನಟರಾಜ್, ಡಾ. ಶಿವಕುಮಾರ್,ಡಾ. ದಿನೇಶ್, ಡಾ ತಿರುಮಲ, ಡಾ. ಯೋಗೀಶ್, ಡಾ.ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243