ದಿನದ ಸುದ್ದಿ
ಕನ್ನಡ ಮತ್ತು ಸಂವಹನ ಕೌಶಲ ; ವಿಶೇಷ ಉಪನ್ಯಾಸ ಕಾರ್ಯಕ್ರಮ
ಸುದ್ದಿದಿನ, ಚನ್ನಗಿರಿ : ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ಕನ್ನಡ ಮತ್ತು ಸಂವಹನ ಕೌಶಲ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಮಂಜುನಾಥ್ ಕೆ. ಮುಖ್ಯಸ್ಥರು ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಚಿತ್ರದುರ್ಗ ಇವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾಲೇಜಿನ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಆನಂದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾಗತ ಭಾಷಣವನ್ನು ಸಹಾಯಕ ಪ್ರಾಧ್ಯಾಪಕರು, ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷಣ್ಮುಖಪ್ಪ ಕೆ. ಹೆಚ್ ಮಾಡಿದರು. ಹಾಗೆಯೇ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ, ಡಾ. ರವಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಅಮೃತೇಶ್ವರ ಬಿ. ಜಿ. ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಮೆಹಮೂದ್ ಖಾನ್, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ ಶ್ರೀ ವಿಜಯ ಕುಮಾರ ಕೆ. ಸಂಚಾಲಕರು, ಐಕ್ಯೂಎಸಿ ಶ್ರೀ ಗೋವರ್ಧನ್ ಗಿರಿಶ್ಯಾಮ್, ಅತಿಥಿ ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ ಶ್ರೀ ಶಕೀಲ್ ಅಹಮದ್, ಅತಿಥಿ ಉಪನ್ಯಾಸಕರು, ಕನ್ನಡ ವಿಭಾಗ ಶ್ರೀ ಹನುಮಂತಪ್ಪ ಎ, ಅತಿಥಿ ಉಪನ್ಯಾಸಕರು, ಕನ್ನಡ ವಿಭಾಗ ಇವರು ಉಪಸ್ಥಿತರಿದ್ದರು.
ಕು.ರೇಣುಕಾ ಹಾಗೂ ಕು.ತೇಜು, ಐಚ್ಛಿಕ ಕನ್ನಡ ವಿದ್ಯಾರ್ಥಿನಿಯರು, ಪ್ರಥಮ ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕು. ಹರ್ಷಿಣಿ ಹಾಗೂ ಕು. ಜಯಲಕ್ಷ್ಮಿ, ಐಚ್ಛಿಕ ಕನ್ನಡ ವಿದ್ಯಾರ್ಥಿನಿ, ಅಂತಿಮ ಪದವಿ ವಿದ್ಯಾರ್ಥಿನಿ ನಿರೂಪಿಸಿದರು. ಕು. ಸಂಜೀವಿನಿ, ಐಚ್ಛಿಕ ಕನ್ನಡ ವಿದ್ಯಾರ್ಥಿನಿ, ಅಂತಿಮ ಪದವಿ ವಿದ್ಯಾರ್ಥಿನಿ ವಂದನಾರ್ಪಣೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243