ದಿನದ ಸುದ್ದಿ

ಚಿತ್ರದುರ್ಗಕ್ಕೆ ಬಂದ್ರು ನೂತನ ಜಿಲ್ಲಾಧಿಕಾರಿ : ಬೀಳುವುದೇ ಅಕ್ರಮ ಮರಳು ದಂಧೆಗೆ ಕಡಿವಾಣ

Published

on

ಸುದ್ದಿದಿನ ಡೆಸ್ಕ್: ಚಿತ್ರದುರ್ಗ ನೂತನ ಜಿಲ್ಲಾಧಿಕಾರಿಯಾಗಿ ಗಿರೀಶ್ ಶನಿವಾರ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ ಅಧಿಕಾರ ಹಸ್ತಾಂತರ ಮಾಡಿದರು.

ಜವಳಿ ಹಾಗೂ ಕೈಮಗ್ಗ ಇಲಾಖೆ ಆಯುಕ್ತರಾಗಿ ಕೆಲಸ ಮಾಡಿದ್ದ ಗಿರೀಶ್ ದಾವಣಗೆರೆ ಜಿಲ್ಲೆಯ ಸಿಇಒ ಆಗಿ ಕೆಲಸ ಮಾಡಿದ್ದಾರೆ. 2010 ಬ್ಯಾಚ್ ನಲ್ಲಿ ಐಎಎಸ್‌ ಪೂರ್ಣಗೊಳಿಸಿರುವ ಅವರು ವೃತ್ತಿಯಲ್ಲಿ ಹೆಸರು ಮಾಡಿದ್ದಾರೆ.

ಅಕ್ರಮ ಮರಳು ದಂಧೆಗೆ ಬೀಳಲಿ ಕಡಿವಾಣ
ಜಿಲ್ಲೆಯ ವೇದಾವತಿ ನದಿ ತೀರ, ವಿವಿ ಸಾಗರ ಸೇರಿದಂತೆ ವಿವಿಧೆಡೆ ಅಕ್ರಮ ಮರಳು ಸಾಗಣೆ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಈ ಅಕ್ರಮಗಳಿಗೆ ನೂತನ ಜಿಲ್ಲಾಧಿಕಾರಿ ಕಡಿವಾಣ ಹಾಕಲಿ ಎಂಬುದು ಜಿಲ್ಲೆಯ ಜನರ ಆಶಯ.ಅಕ್ರಮ ಮರಳು ದಂದೆಗೆ ಕಾನೂನು, ಸುವ್ಯವಸ್ಥೆಯಡಿ ಕಡಿವಾಣ ಹಾಕುವುದಾಗಿ ಡಿಸಿ ಗಿರೀಶ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version