ಲೈಫ್ ಸ್ಟೈಲ್
ಮೂಲಂಗಿ ಸೊಪ್ಪಿನ ಮಹಿಮೆ!
ಮೂಲಂಗಿ ಸೊಪ್ಪು ಹಲವು ರೋಗಗಳನ್ನು ಗುಣಮುಖವಾಗಿಸುತ್ತದೆ. ಮೂಲಂಗಿ ಸೊಪ್ಪಿನಲ್ಲಿ ಶರ್ಕರಪಿಷ್ಟ ಜೀವಸತ್ವ ಅಗತ್ಯ ಪ್ರಮಾಣದಲ್ಲಿ ಇರುತ್ತದೆ. ಮಾತ್ರವಲ್ಲದೆ ಎ, ಬಿ, ಸಿ ಜೀವಸತ್ವಗಳು ವಿಫುಲವಾಗಿವೆ.
ಮೂಲಂಗಿ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು
- ಮೂಲಂಗಿ ಸೊಪ್ಪಿನಲ್ಲಿ ಮೂತ್ರಾಶಯದಲ್ಲಿ ರೂಪಗೊಳ್ಳುವ ಮೂತ್ರ ಕಲ್ಲನ್ನು ಕರಗಿಸಿ, ಹೊರಹಾಕುವ ಶಕ್ತಿಯಿದೆ.
- ಮೂತ್ರಕಲ್ಲಿನ ರೋಗದಿಂದ ನರಳುತ್ತಿರುವ ರೋಗಿಗಳು ನಿಯಮಿತವಾಗಿ ಒಂದು ಬಟ್ಟಲಿನಷ್ಟು ಮೂಲಂಗಿ ರಸವನ್ನು ಸೇವಿಸುತ್ತ ಬಂದರೆ, ಮೂತ್ರದಲ್ಲಿನ ಕಲ್ಲು ಮೂತ್ರದ ಮೂಲಕ ಹೊರಬರುತ್ತದೆ.
- ನಾಯಿಕೆಮ್ಮು ರೋಗದಿಂದ ನರಳುತ್ತಿರುವ ಮಕ್ಕಳಿಗೆ ಒಂದು ಚಹಾ ಚಮಚದಷ್ಟು ಮೂಲಂಗಿ ಸೊಪ್ಪಿನ ರಸದಲ್ಲಿ ಜೇನುತುಪ್ಪ ಹಾಗೂ ಸೈಂಧವ ಲವಣ ಬೆರೆಸಿ ದಿನಕ್ಕೆ ಮೂರು ಬಾರಿ ಕೊಡುತ್ತಾ, ಬಂದರೆ ನಾಯಿ ಕೆಮ್ಮು ಪರಿಹಾರ ಆಗುತ್ತದೆ.
- ಕುದಿಯುವ ನೀರಿನಲ್ಲಿ ಮೂಲಂಗಿ ಸೊಪ್ಪನ್ನು ಬೆರೆಸಿ, ಜೇನುತುಪ್ಪದೊಂದಿಗೆ ಸೇವಿಸುತ್ತ ಬಂದರೆ, ಕಾಮಾಲೆ ರೋಗವನ್ನು ನಿಯಂತ್ರಿಸಬಹುದು.
- ಮೂಲಂಗಿ ಸೊಪ್ಪಿನ ರಸದೊಂದಿಗೆ ಸಮ ಪ್ರಮಾಣ ಗಣಕೆ ಸೊಪ್ಪನ ರಸ, ಜೇನುತುಪ್ಪದೊಂದಿಗೆ ಬೆರೆಸಿ, ದಿನಕ್ಕೆ ಮೂರು ಬಾರಿ ಸೇವಿಸಿದರೆ ಪಿತ್ತ, ಮಲಬದ್ದತೆ ನಿವಾರಣೆಯಾಗುತ್ತದೆ.
ನೂರು ಗ್ರಾಂ ಮೂಲಂಗಿ ಸೊಪ್ಪಿಲ್ಲಿರುವ ಪೋಷಕಾಂಶಗಳು
- ಸಸಾರಜನಕ : 0.7 ಗ್ರಾಂ
- ಕೊಬ್ಬು : 0.4 ಗ್ರಾಂ
- ನಾರಿನಾಂಶ : 0.8 ಗ್ರಾಂ
- ಶರ್ಕರ ಪಿಷ್ಠ : 4.2 ಗ್ರಾಂ
- ಸುಣ್ಣ : 35 ಮಿಲಿ ಗ್ರಾಂ
- ರಂಜಕ : 22 ಮಿಲಿ ಗ್ರಾಂ
- ಕಬ್ಬಿಣ : 0.3 ಮಿಲಿ ಗ್ರಾಂ
- ಆಕ್ಯಲಿಕ್ ಆಮ್ಲ : 9.2 ಗ್ರಾಂ
- ನಿಕೋಟಿನಿಕ್ ಆಮ್ಲ : 0.5 ಮಿಲಿ ಗ್ರಾಂ
- ನಿಯಾಸಿನ್ : 0.4 ಮಿಲಿ ಗ್ರಾಂ
- ಸೋಡಿಯಂ : 41 ಮಿಲಿ ಗ್ರಾಂ
- ಪೊಟಾಷಿಯಂ : 325 ಮಿಲಿ ಗ್ರಾಂ
- ಬಿ, ಜೀವಸತ್ವ : 60 ಎಂ.ಸಿ.ಜಿ