ದಿನದ ಸುದ್ದಿ

ಹಳೇ ದೇವರಿಗೆ ಹಳೇ ನೋಟು..!

Published

on

  • ಪಂಜು‌ ಗಂಗೊಳ್ಳಿ,‌ ವ್ಯಂಗ್ಯಚಿತ್ರಕಾರರು

ಪ್ಪು ಹಣದ ಮೂಲೋತ್ಪಾಟನೆ ಮಾಡುತ್ತೇನೆಂದು 2016 ರ ನವೆಂಬರ್ 8 ರ ಮಧ್ಯರಾತ್ರಿಯಿಂದ ಮೋದಿ ಸರ್ಕಾರ 500 ಮತ್ತು 1000 ರುಪಾಯಿ ನೋಟುಗಳನ್ನು ಬ್ಯಾನ್ ಮಾಡಿ ಆರ್ಥಿಕತೆಯನ್ನು ಮೂರಾಬಟ್ಟೆ ಮಾಡಿದ್ದು ನೆನಪಿದೆಯಲ್ಲ…ಅದರ ನಂತರ, ಈ ನೋಟುಗಳನ್ನು ಇಟ್ಟುಕೊಳ್ಳುವುದು ಅಪರಾಧ ಅಂತ ಕಾನೂನು ಕೂಡಾ ಮಾಡಿತ್ತು.

ಇಷ್ಟಾಗಿಯೂ ತಿರುಪತಿ ತಿಮ್ಮಪ್ಪನ ಭಕ್ತರು ಹುಂಡಿಯಲ್ಲಿ ಈ ಹಳೇ ನೋಟುಗಳನ್ನು ಹಾಕುವುದು ನಿಂತಿಲ್ಲ! ತಿರುಮಲ ತಿರುಪತಿ ದೇವಸ್ಥಾನಂ ಚೇರ್ ಮ್ಯಾನ್ ವೈ ವಿ ಸುಬ್ಬಾ ರೆಡ್ಡಿ ‘1.8 ಲಕ್ಷ 1000 ರುಪಾಯಿ ನೋಟು (18 ಕೋಟಿ) ಮತ್ತು 6.34 ಲಕ್ಷ 500 ರುಪಾಯಿ ನೋಟು (31.7 ಕೋಟಿ) ಗಳು ಸಂಗ್ರಹವಾಗಿವೆ.

ಇವುಗಳ ಒಟ್ಟು ಮೌಲ್ಯ 50 ಕೋಟಿ ರುಪಾಯಿಯಾಗಿದ್ದು ಇದನ್ನು ರಿಸರ್ವ್ ಬ್ಯಾಂಕಲ್ಲಿ ಜಮಾ ಮಾಡಲು ವಿಶೇಷ ಅನುಮತಿ ದಯಪಾಲಿಸಬೇಕು’ ಅಂತ ಕೇಂದ್ರ ಹಣಕಾಸು ಮಂತ್ರಿಣಿ ನಿರ್ಮಲಾ ಸೀತಾರಾಮನ್ ರಿಗೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ! ಆದರೆ, ತಿರುಪತಿ ತಿಮ್ಮಪ್ಪನ ಪ್ರಾರ್ಥನೆಗೆ ನಿಮ್ಮಿ ಮೇಡಂ ಇನ್ನೂ ಹೂಂ ಅನ್ನಿಲ್ಲ ಉಹೂಂ ಅನ್ನೂ ಇಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version