ಲೈಫ್ ಸ್ಟೈಲ್

ಗೋಲ್ಡ್ ಪೆಡಿಕ್ಯೂರ್ ಮೆನಿಕ್ಯೂರ್ ನಿಂದ ಹೆಚ್ಚಾಯ್ತು ಅಂದ!

Published

on

ಚಿನ್ನ ಬರೀ ಒಡವೆಗಷ್ಟೇ ಸೀಮಿತ ಎಂಬ ಮಾತು ಸೌಂದರ್ಯ ಜಗತ್ತಿನಲ್ಲಿ ಇದೀಗ ಸುಳ್ಳಾಗಿದೆ. ಚಿನ್ನದ ಎಸೆನ್ಸ್ ಬಳಸಿ ಪೆಡಿಕ್ಯೂರ್, ಮೆನಿಕ್ಯೂರ್ ಕೂಡ ಮಾಡಬಹುದು.

ಭಾರತದ ಮಹಿಳೆಗೆ ಚಿನ್ನದ ಮೇಲೆ ಇನ್ನಿಲ್ಲದ ವ್ಯಾಮೋಹ.ಬಗೆಬಗೆಯ ಬಂಗಾರದ ಒಡವೆತೊಟ್ಟರೆ ಅದೇನೋ ಸಂತೃಪ್ತ ಭಾವ ಆಕೆಗೆ. ಚಿನ್ನದ ಬೆಲೆ ಗಗನಕ್ಕೇರುವ ಇಂದಿನ ದಿನಗಳಲ್ಲಿ ಹೂಡಿಕೆಗೆ ಚಿನ್ನ ಉತ್ತಮ ಸಾಧನ. ಇದೀಗ ಚಿನ್ನ ಬರೀ ಪಡವೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಫ್ಯಾಷನ್, ಸೌಂದರ್ಯಲೋಕದಲ್ಲೂ ಚಿನ್ನದ ಪಾತ್ರ ಅಪರಿಮಿತ.

ಇದೀಗ ಚಿನ್ನವನ್ನು ಪೆಡಿಕ್ಯೂರ್-ಮೆನಿಕ್ಯೂರ್ ಗಳಲ್ಲೂ ಬಳಸಲಾಗುತ್ತಿದೆ. ಓ ಗೋಲ್ಡ್-ಪೆಡಿಕ್ಯೂರ್-ಮೆನಿಕ್ಯೂರ್ ಚಾಲ್ತಿಗೆ ಬಂದಿದ್ದು ತೀರಾ ಇತ್ತೀಚೆಗೆ. ಗೋಲ್ಡ್ ಎಸೆನ್ಸ್ ಬಳಸಿ ಕೈಕಾಲುಗಳ ಸೌಂದರ್ಯವರ್ಧನೆ ಮಾಡುವ ಪೆಡಿಕ್ಯೂರ್-ಮೆನಕ್ಯೂರ್ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಆಂಟಿ ಏಜಿಂಗ್ ಆಗಿಯೂ ಇದು ಕೆಲಸ ಮಾಡುತ್ತದೆ.

ಗೋಲ್ಡ್ ಪೆಡಿಕ್ಯೂರ್-ಮೆನಿಕ್ಯೂರ್ ಪ್ರಕ್ರಿಯೆ ಆರಂಭವಾಗುವುದು ತ್ವಚೆಯನ್ನು ಸಂಪೂರ್ಣವಾಗಿ ಕ್ಲೆನ್ಸಿಂಗ್ ಮಾಡು ಮೂಲಕ. ನಂತರ ಸ್ಕ್ರಬ್ ಮಾಡಬೇಕು. ಮೂರನೇ ಹಂತದಲ್ಲಿ ಗೋಲ್ಡ್ ಎಸೆನ್ಸ್ ಮಿಕ್ಸ್ ಮಾಡಿರುವ ಸ್ಪೆಷಲ್ ಕ್ರೀಮ್‍ನಲ್ಲಿ ಮಸಾಜ್ ಮಾಡಿ, ತ್ವಚೆಗೆ ಹೊಳಪು ನೀಡಲಾಗುತ್ತದೆ.

ಇದರಿಂದ ನರಗಳಲ್ಲಿ ಒತ್ತಡ ಕಡಿಮೆಯಾಗಿ ರಕ್ತ ಸಂಚಾರ ಸುಗಮವಾಗುತ್ತದೆ. ಅದಾಗಿ ಕೈಗಳಿಗೆ ಮತ್ತು ಪಾದಗಳಿಗೆ ಗೋಲ್ಡ್ ಪ್ಯಾಕ್ ಹಾಕಿ ಕವರ್ ಮಾಡಿದರೆ ಅದು ತ್ವಚೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸೌಂದರ್ಯ ತಜ್ಞೆಯರು ಹೇಳುವ ಪ್ರಕಾರ ಈ ಗೋಲ್ಡ್ ಪೆಡಿಕ್ಯೂರ್-ಮೆನಿಕ್ಯೂರ್15 ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಮಾಡಿಸಿಕೊಂಡರೆ ಸಾಕು. ಇದನ್ನು ಸೌಂದರ್ಯ ತಜ್ಞೆಯರಿಂದ ಮಾತ್ರ ಮಾಡಿಸಿಕೊಳ್ಳಬಹುದು.

ಈ ಗೋಲ್ಡ್ ಪೆಡಿಕ್ಯೂರ್-ಮೆನಿಕ್ಯೂರ್‍ನಿಂದ ತ್ವಚೆಗೆ ಯಾವ ಅಡ್ಡ ಪರಿಣಾಮಗಳು ಇರುವುದಿಲ್ಲ.ಬದಲಾಗಿ ಸದಾ ಹೊಳೆಯುವ, ಮೃದುವಾದ ತ್ವಚೆಯನ್ನು ಪಡೆಯಬಹುದು ಎನ್ನುವುದು ಸೌದರ್ಯ ತಜ್ಞರ ಅಭಿಪ್ರಾಯ.

ಕೈಗಳ ಆರೈಕೆ

ದಿನನಿತ್ಯ ಮನೆಯಲ್ಲಿ ಕೆಲಸ ಮಾಡಿ ಕೈಗಳ ತ್ವಚೆ ಒರಟಾಗಿರುತ್ತದೆ. ಇದು ಕೈಗಳನ್ನು ಅಂದಗೆಡಿಸುತ್ತದೆ. ಹೀಗಾಗಿ ಸೌಂದರ್ಯಪ್ರಿಯರು ಪಾರ್ಲರ್‍ಗಳ ಮೊರೆ ಹೋಗುವುದು ಸಾಮಾನ್ಯ.

ಮನೆಯಲ್ಲಿ ಮೆನಿಕ್ಯೂರ್ ಮಾಡಿಕೊಂಡರೂ ಅದು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಪಾರ್ಲರ್ಗಳಲ್ಲಿ ಬಗೆ ಬಗೆಯ ಮೆನಿಕ್ಯೂರ್ ಸಾಧನಗಳಿದ್ದು ಕೈಗಳ ತ್ವಚೆ ಒರಟಾದಾಗಲೆಲ್ಲ ನಯವಾಗಿಸಬಹುದು.

ಸೌಂದರ್ಯ ಜಗತ್ತಿನಲ್ಲಿ ದಿನದಿನವೂ ಹೊಸ ಹೊಸ ಅವಿಷ್ಕಾರಗಳಾಗುತ್ತವೆ. ಗೋಲ್ಡ್ ಫೇಷಿಯಲ್, ಗೋಲ್ಡ್ ಪೆಡಿಕ್ಯೂರ್, ಮೆನುಕ್ಯೂರ್ ಎಲ್ಲವು ಈಗ ಪಾರ್ಲರ್ಗಳಲ್ಲಿ ಲಭ್ಯ.

ಮೆನಿಕ್ಯೂರ್‍ನಲ್ಲಿ ಉಗುರುಗಳ ಅಂದ ಹೆಚ್ಚಿಸುವುದು, ಬೆರಳುಗಳ ಪೋಷಣೆ, ಅಂಗೈ ತ್ವಚೆಯ ರಕ್ಷಣೆಯ, ಚರ್ಮ ಬಿರುಕು ಬಿಡದಂತೆ ಒರಟಾಗದಂತೆ ಮಾಡುವ ಲೈಟ್ ಮಸಾಜ್, ಉಗುರುಗಳ ಸ್ಚಚ್ಚತೆ, ನೈಲ್ ಪಾಲಿಶ್ ಹಚ್ಚುವುದು, ಬೇಡ ಅನ್ನಿಸಿದಾಗ ನೈಲ್ ಪಾಲಿಶ್ ರಿಮೂವರ್ ಬಳಸಿ ತೆಗೆಯುವುದು ಮುಂತಾದ ವಿಧಾನಗಳ ಕಡೆಗೆಗಮನ ಅಗತ್ಯ.

ಗೋಲ್ಡ್ ಮೆನಿಕ್ಯೂರ್‍ನಲ್ಲಿ ಉಗುರುಗಳ ಅಂದ ಹೆಚ್ಚಿಸುವುದರ ಜೊತೆಗೆ ಉಗುರುಗಳ ಪಕ್ಷದ ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯ. ನೈಲ್ ಪಾಲಿಶ್ ಹಚ್ಚಿಕೊಂಡರೆ ಬಣ್ಣ ದೀರ್ಘಕಾಲ ಹಾಗೆ ಉಳಿಯುತ್ತದೆ. ನೈಲ್ ಪಾಲಿಶ್, ಜತೆಗೆ ಯಾವುದೇ ಸೌಂದರ್ಯ ವರ್ಧಕಗಳನ್ನು ಬಳಸುವಗ ಉತ್ತಮ ಗುಣಮಟ್ಟದವುಗಳನ್ನೇ ಖರೀದಿಸಬೇಕು.

 

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ |9986715401

Leave a Reply

Your email address will not be published. Required fields are marked *

Trending

Exit mobile version