ದಿನದ ಸುದ್ದಿ

ಎಚ್.ಡಿ.ಕೆಯಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ !

Published

on

ಸುದ್ದಿದಿನ, ಬೆಂಗಳೂರು : ದ್ಯೋಗ ಭದ್ರತೆ ಇಲ್ಲದೆ ಅನೇಕ ಯುವಕರು ಇತ್ತೀಚೆಗೆ ಸಂಕಷ್ಟಪಡುತ್ತಿದ್ದು, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ‌. ಈ ನಿಟ್ಟಿನಲ್ಲಿ ಅವರಿಗೆ ಉದ್ಯೋಗ ದೊರಕುವಂತೆ ಮಾಡಲು ಉದ್ಯೋಗಮೇಳವನ್ನು ಈ ತಿಂಗಳಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ (ನಿನ್ನೆ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಒಂದು ದಿನದ ಉದ್ಯೊಗ ಮೇಳವನ್ನು ನಡೆಸಲು ತೀರ್ಮಾನಿಸಲಾಗಿದೆ. ಉದ್ಯೋಗ ಹಾಗೂ ಶೈಕ್ಷಣಿಕ ಸಮಸ್ಯೆಗಳು ಜನತಾ ದರ್ಶನದಲ್ಲಿ ತುಂಬಾ ಕಂಡು ಬಂದಿದ್ದು, ಅವರಿಗೆ ಸಹಕಾರಿಯಾಗಲು ಈ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸದರು.

ಇನ್ನು ಉದ್ಯೋಗ ಮೇಳವನ್ನು ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸುವ ಯೋಚನೆ ಇದೆಯಾದರೂ ಯಾವ ಸ್ಥಳದಲ್ಲಿ ನಡೆಸಿದರೆ ಸೂಕ್ತ ಎಂಬುದರ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಉದ್ಯೋಗ ಮೇಳವನ್ನು ಮುಖ್ಯಮಂತ್ರಿ ಗಳ ಅಧಿಕೃತ ಗೃಹ ಕಚೇರಿ ಕೃಷ್ಣಾ ದಲ್ಲಿ ಹಮ್ಮಿಕೊಳ್ಳುವ ಯೋಚನೆ ಇದೆ. ಆದರೂ ಮತ್ತೆ ಯಾವ ಸ್ಥಳದಲ್ಲಿ ಮೇಳವನ್ನು ನಡೆಸಿದರೆ ಒಳಿತು ಎಂಬುದನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version