ದಿನದ ಸುದ್ದಿ

ಮತ್ತಷ್ಟು ದುಬಾರಿಯಾಯ್ತು ಗೃಹೋಪಯೋಗಿ ವಸ್ತುಗಳು; ಆಮದು ಸರಕುಗಳ ಮೇಲೆ ಸುಂಕ ಏರಿಕೆ

Published

on

ಸುದ್ದಿದಿನ ದೆಹಲಿ: ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಇಳಿಕೆಯಿಂದಾಗಿ ಬುಧವಾರ ರಾತ್ರಿಯಿಂದಲೇ 19 ಸರಕುಗಳ ಆಮದಿನ ಮೇಲೆ ಕೇಂದ್ರಸರ್ಕಾರ ಸುಂಕ ವಿಧಿಸಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕೆಲ ವಸ್ತುಗಳ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಹೋಮ್ ಅಪ್ಲೆಯನ್ಸ್ ಗಳಾದ ಏರ್ ಕಂಡಿಷನರ್, ರೆಫ್ರಿಜಿರೇಟರ್, ವಾಷಿಂಗ್ ಮಶಿನ್, ಸ್ಪೀಕರ್, ಪಾದರಕ್ಷೆಗಳು, ಕಂಪ್ರೆಸರ್ಗಳ ಸೇರಿದಂತೆ 19 ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.10ರಿಂದ ಶೇ. 25ರಷ್ಟು ಸುಂಕ ಹೆಚ್ಚಳವಾಗಲಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಆಮದು ಸುಂಕ ಜಾರಿಗೆ ಬರಲಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Trending

Exit mobile version