ದಿನದ ಸುದ್ದಿ
ಗೂಗಲ್ ಡೂಡಲ್ ಆದ್ರು ಸರ್ ಎಂ ವಿಶ್ವೇಶ್ವರಯ್ಯ
ಸುದ್ದಿದಿನ ಡೆಸ್ಕ್: ವಿಶ್ವದ ಪ್ರತಿಭಾನ್ವಿತರು, ಗಣ್ಯರು, ವಿಜ್ಞಾನಿಗಳು, ಸಾಹಿತಿಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅಂತರ್ಜಾಲ ಸರ್ಚ್ ಎಂಜಿನ್ ದೈತ್ಯ ಗೂಗಲ್ ತನ್ನ ಮುಖಪುಟದಲ್ಲಿ ಪ್ರಕಟಿಸುವ ಡೂಡಲ್‍ನಲ್ಲಿ ಶನಿವಾರ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರು ಕಾಣಿಸಿಕೊಂಡಿದ್ದರಾರೆ.
ಗೂಗಲ್‍ನ ಈ ಆಯ್ಕೆ ಬಗ್ಗೆ ಬಳಕೆದಾರರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೆಆರ್‍ಎಸ್ ಅಣೆಕಟ್ಟಿನ ಹಿನ್ನೆಲೆಯಮುಂದೆ ಸರ್ ಎಂ ವಿ ಅವರಿರುವ ಚಿತ್ರವು ಗೂಗಲ್ ಮುಖಪುಟ ತೆರೆದ ಕೂಡಲೇ ಕಾಣಿಸಿಕೊಳ್ಳುತ್ತದೆ. ವಿಶ್ವೇಶ್ವರಯ್ಯ ಅವರ ಜಯಂತಿ ಹಿನ್ನಲೆಯಲ್ಲಿ ಗೂಗಲ್ ಈ ಕೊಡುಗೆ ನೀಡಿದೆ.
ಈಚೆಗೆ ನಟ ಸಾರ್ವಭೌಮ ಡಾ. ರಾಜ್‍ಕುಮಾರ್ ಅವರನ್ನು ಗೂಗಲ್ ತನ್ನ ಡೂಡಲ್‍ನಲ್ಲಿ ಪರಿಚಯಿಸಿತ್ತು. ಕುವೆಂಪು ಅವರೂ ಕೂಡ ಡೂಡಲ್‍ನಲ್ಲಿ ಕಾಣಿಸಿಕೊಂಡಿದ್ದರು.