ದಿನದ ಸುದ್ದಿ

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ, ಗಣ್ಯರ ಶುಭಾಶಯ

Published

on

ಸುದ್ದಿದಿನ ಡೆಸ್ಕ್ : ನಾಡಿನಾದ್ಯಂತ ಗೌರಿ- ಗಣೇಶ ಹಬ್ಬದ (Gouri Ganesha Festival ) ಸಂಭ್ರಮ ಮನೆ ಮಾಡಿದೆ. ಇಂದು ಸ್ವರ್ಣಗೌರಿ ವ್ರತವನ್ನು ಜನತೆ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ.

ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮಂಟಪದಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ, ಸುಮಂಗಲಿಯರಿಗೆ ಬಾಗಿನ ನೀಡುವ ಮೂಲಕ ಹಬ್ಬ ಆಚರಿಸಲಾಗುತ್ತಿದೆ.

ಇದನ್ನೂ ಓದಿ |ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ ದಿನಾಚರಣೆ

ನಾಳೆ ಗಣೇಶ ಚತುರ್ಥಿಗೆ ಭರದ ಸಿದ್ಧತೆ ನಡೆದಿದೆ. ಮಾರುಕಟ್ಟೆಯಲ್ಲಿ ಹೂ, ಹಣ್ಣು, ಬಾಳೆಕಂದು, ಗೌರಿ ಗಣೇಶ ಮೂರ್ತಿಗಳ ಬೆಲೆಗಳು ದುಬಾರಿಯಾಗಿದ್ದರೂ ಖರೀದಿ ಎಂದಿನಂತೆ ಸಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್. ಅಶೋಕ ಸೇರಿದಂತೆ ಹಲವು ಗಣ್ಯರು ನಾಡಿನ ಜನತೆಗೆ ಸ್ವರ್ಣಗೌರಿ ವ್ರತದ ಶುಭಾಶಯ ಕೋರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version