ದಿನದ ಸುದ್ದಿ
ಸಂಚಾರಿ, ಅರೆ ಸಂಚಾರಿ ಕುರಿ, ಮೇಕೆ ಸಾಕಾಣಿಕೆ : ಅರ್ಜಿ ಆಹ್ವಾನ
ಸುದ್ದಿದಿನ,ಬಳ್ಳಾರಿ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ 2019-20ನೇ ಸಾಲಿನಲ್ಲಿ ಸಂಚಾರಿ, ಅರೆ ಸಂಚಾರಿ ಕುರಿ, ಮೇಕೆ ಸಾಕಾಣಿಕದಾರರಿಗೆ ಹಾಗೂ ಇತರೆ ಪರಿಕರಗಳ ಕಿಟ್‍ಗಳನ್ನು ಉಚಿತವಾಗಿ ವಿತರಿಸುವ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ 43, ಪರಿಶಿಷ್ಟ ಪಂಗಡಕ್ಕೆ 17 ಹಾಗೂ ಇತರೆ 190 ಸೇರಿದಂತೆ ಒಟ್ಟು 250 ಕುರಿಗಳನ್ನು ವಿತರಿಸಲು ಗುರಿ ನಿಗದಿಪಡಿಸಲಾಗಿದೆ. ಅರ್ಜಿಗಳನ್ನು ಸಂಬಂಧಿಸಿದ ಆಯಾ ತಾಲೂಕು ಪಶು ಆಸ್ಪತ್ರೆಗಳಲ್ಲಿ ಅಥವಾ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಮೇ 31ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ದೂ.ಸಂ: 08394-227320ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.