ರಾಜಕೀಯ

ಬ್ರೇಕಿಂಗ್ | ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ ; ವಿಧಾನ ಸೌಧದಲ್ಲಿ ಕಮೀಷನ್ ದಂಧೆ ನಡೀತಿದೆ : ಬಿ.ಎಸ್.ವೈ ಕಿಡಿ

Published

on

ಸುದ್ದಿದಿನ, ಬಾಗಲಕೋಟೆ : ಸಿಎಂ ಎಚ್ ಡಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದ್ದು, ಸರ್ಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೂ ಆಗದಂತಹ ಸ್ಥಿತಿ ನಿರ್ಮಾಣಮಾಡಿದ್ದಾರೆ. ರಾಜ್ಯ ದ ಜನತೆಗೆ ನಾವು ವಾಸ್ತವ ಸ್ಥಿತಿ ತಿಳಿಸ್ತಿದ್ದೇವೆ. ಹಾಗೇ ಯಾವುದೇ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ಸಿಎಂ ಎಚ್ ಡಿಕೆ ಕುಮಾರಸ್ವಾಮಿ ವಿರುದ್ಧ ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರದ ಕಚ್ಚಾಟ ಧಾರಾವಾಹಿಯಂತೆ

ಸಚಿವ ರಮೇಶ್ ಜಾರಕಿಹೊಳಿ 12 ಶಾಸಕರೊಂದಿಗೆ ಬಿಜೆಪಿಗೆ ಸೇರುವ ವಿಚಾರವಾಗಿ ಮಾತನಾಡಿದ ಅವರು”ಈ ಬಗ್ಗೆ ನನಗೇನು ಗೊತ್ತಿಲ್ಲ. ನಿಮ್ಮಿಂದ ಈ ವಿಚಾರ ಈಗ ನನಗೆ ತಿಳಿದಿದೆ ಎಂದರು”. ಒಂದು ವೇಳೆ ರಮೇಶ್ ಜಾರಕಿಹೊಳಿ & ಟೀಮ್ ಬಂದ್ರೆ ನಿಮ್ಮ ನಿಲುವೇನು ಎನ್ನುವ ಪ್ರಶ್ನೆಗೆ ಬಿಎಸ್ವೈ ಪ್ರತಿಕ್ರಿಯೆ ನೀಡಿದ ಬಿ.ಎಸ್.ವೈ “ಈಗಲೇ ಆ ನಿರ್ಧಾರ ಹೇಳಲಿಕ್ಕೆ ಆಗೋಲ್ಲ. ಮೈತ್ರಿ ಸರ್ಕಾರದಲ್ಲಿ ಪರಸ್ಪರ ಕಚ್ಚಾಟ, ಗುದ್ದಾಟ ಇರುವುದಂತೂ ಸತ್ಯ. ಮೈತ್ರಿ ಸರ್ಕಾರ ದ ಕಚ್ಚಾಟ ಧಾರಾವಾಹಿ ಯಂತೆ ದೃಶ್ಯ,ಮುದ್ರಣ ಮಾಧ್ಯಮ ದಲ್ಲಿ ಬರ್ತಿದೆ. ಕಾಂಗ್ರೆಸ್ ಸಭೆಯ ವಾಸ್ತವ ಸ್ಥಿತಿ ನನಗೆ ಗೊತ್ತಿಲ್ಲ. ಈ ಸಮಯದಲ್ಲಿ ನಾನು ಟೀಕೆ ಟಿಪ್ಪಣಿ ಮಾಡಿದ್ರೆ ತಪ್ಪಾಗುತ್ತೆ. ಅವರು ಏನು ನಿರ್ಧಾರ ತಗೆದುಕೊಳ್ತಾರೆ ಅನ್ನೋದು ಕಾದುನೋಡೋಣ” ಎಂದರು.

ವಿಧಾನಸೌಧದಲ್ಲಿ ಕಮೀಷನ್ ದಂಧೆ

ವರ್ಗಾವಣೆ ದಂಧೆ ಬಿಎಸ್ವೈ ಆರೋಪಕ್ಕೆ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ “ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ನಾನು ಹೇಳುತ್ತಿಲ್ಲ. ಮಾಧ್ಯಮಗಳಲ್ಲೇ ಈ ಬಗ್ಗೆ ಬಂದಿದೆ.ವಾಸ್ತವ ಸತ್ಯಾಂಶ ನನಗೂ ಗೊತ್ತಿದೆ, ಮಾಧ್ಯಮದವರಿಗೂ ಗೊತ್ತಿದೆ. ಯಡಿಯೂರಪ್ಪ ಆರೋಪ ಮಾಡೋದಲ್ಲ ಅದು ಎಂದರು.” ಹಾಗೇ ವಿಧಾನಸೌಧದಲ್ಲಿ ಕಮೀಶನ್ ದಂಧೆ ನಡೆಯುತ್ತಿದೆ ಎಂಬ ಬಾಂಬ್ ಸಿಡಿಸಿದ ಬಿ.ಎಸ್.ವೈ “ವಿರೋಧಪಕ್ಷದ ನಾಯಕನಾಗಿ ಹೇಳುತ್ತಿದ್ದೇನೆ. ನಾನು ಸಂಪರ್ಕ ಮಾಡುವ ಅಧಿಕಾರಿಗಳು ಹೇಳ್ತಿದ್ದಾರೆ. ವರ್ಗಾವಣೆ ದಂಧೆ,ಹಾಗೂ ಕಮೀಶನ್ ಕೊಡದೆ ವಿಧಾನಸೌಧದಲ್ಲಿ ಯಾವುದೇ ಕೆಲಸವಾಗ್ತಿಲ್ಲ ಎಂದರು’. ರೆಫೆಲ್ ಯುದ್ಧ ಹಗರಣ ಕುರಿತು ಕೆ.ಸಿ. ವೇಣುಗೋಪಾಲ ಪ್ರತಿಭಟನೆ ಮಾಡುವ ಹೇಳಿಕೆ ವಿಚಾರ. ಅವರಿಗೆ ಬೇರೆ ಕೆಲಸವಿಲ್ಲ. ಅದಕ್ಕೆ ಪ್ರತಿಭಟನೆ ಮಾಡ್ತಾರೆ ಎಂದು ಗುಡುಗಿದರು.

ಸಿ.ಎಂ ಬೆಂಗಳೂರಲ್ಲಷ್ಟೇ ರಾಜಕಾರಣ

ಉತ್ತರ ಕರ್ನಾಟಕ ಭಾಗಕ್ಕೆ ಸಿಎಂ ಭೇಟಿ ನೀಡಿಲ್ಲ. ರಾಜಕೀಯ ಜಂಜಾಟದಲ್ಲಿ ಸಿಎಂ ಮುಳುಗಿದ್ದಾರೆ. ರಾಹುಲ್ ಗಾಂಧಿ ದೇಶದಲ್ಲಿ ಏನು ಕೆಲ್ಸ ವಾಗಿಲ್ಲ ವೆಂದು ಮಾತನಾಡುತ್ತಿದ್ದಾರೆ. ಆದ್ರೆ ಮೋದಿ ಸರ್ಕಾರ ಹಿಂದಿನ ಸರ್ಕಾರ ಕ್ಕಿಂತ ದೇಶ ಅಭಿವೃದ್ಧಿ ಕಾಣ್ತಿದೆ. ಮನಮೋಹನ್ ಸರ್ಕಾರ ಕ್ಕಿಂತಲೂ ನಮ್ಮ ಸರ್ಕಾರ ಸಾಧನೆ ಮಾಡಿದೆ.ಜಿಡಿಪಿ ದರದಲ್ಲೂ ಮುಂದಿದೆ. ಸಿಎಂ
ನೀರಾವರಿಗೆ ಆದ್ಯತೆ ಕೊಟ್ಟಿಲ್ಲ.ರಾಜ್ಯ ದಲ್ಲಿ ಹಿಂದೆಂದೂ ಕಾಣದ ಸರ್ಕಾರವಿದೆ. ಕೇವಲ ಬೆಂಗಳೂರಲ್ಲಿ ಸಿಎಂ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಗಳಕಡೆ ಗಮನ ಹರಿಸುತ್ತಿಲ್ಲ. ಜಿಲ್ಲಾಮಂತ್ರಿಗಳು ಜಿಲ್ಲಾಮಟ್ಟಕ್ಕೆ ಹೋಗುತ್ತಿಲ್ಲ‌ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version