ದಿನದ ಸುದ್ದಿ
ಆರೋಗ್ಯ ಇಲಾಖೆಯಲ್ಲಿನ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ಶಿವಮೊಗ್ಗ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ವೈರಲ್ ರೀಸರ್ಚ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ(ವಿ.ಆರ್.ಡಿ.ಎಲ್.) ವಿಭಾಗದಲ್ಲಿ ಖಾಲಿ ಇರುವ ರೀಸರ್ಚ್ ಸೈಂಟಿಸ್ಟ್ ಮತ್ತು ಪ್ರಯೋಗಶಾಲಾ ತಂತ್ರಜ್ಞರ ತಲಾ ಒಂದು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಸಿಮ್ಸ್‍ನ ಜಾಲತಾಣ : www.sims-shimoga.com ನಲ್ಲಿ ಪಡೆದು, ನಿರ್ದೇಶಕರು ಮತ್ತು ಡೀನ್, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಹೆಸರಿಗೆ ಪಡೆದು ರೂ.500/-ಗಳ ಡಿ.ಡಿ. ಹಾಗೂ ಅಗತ್ಯ ದಾಖಲೆಗಳೊಂದಿಗೆ ಜೂನ್ 05ರೊಳಗಾಗಿ ನಿರ್ದೇಶಕರು ಮತ್ತು ಡೀನ್, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ ವಿಳಾಸಕ್ಕೆ ಸಲ್ಲಿಸಬೇಕು.
ಲಕೋಟೆಯ ಮೇಲೆ ಯಾವ ಹುದ್ದೆಗಾಗಿ ಎಂಬುದನ್ನು ಕಡ್ಡಾಯವಾಗಿ ನಮೂದಿಸುವಂತೆ ಸಿಮ್ಸ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243