ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ಜಾಗ ತಡೆಗೆ ಲ್ಯಾಂಡ್‍ಬೀಟ್
ಸುದ್ದಿದಿನ,ದಾವಣಗೆರೆ : ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ ಜಿಯೋ ಫೆನ್ಸಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದ್ದು ಜಿಲ್ಲೆಯಲ್ಲಿ 19408 ಸರ್ಕಾರದ ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಅವರು ಶನಿವಾರ ಆನಗೋಡು ಬಳಿಯ ಸೈನ್ಸ್ ಭವನದಲ್ಲಿ ನಡೆದ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಇದರಲ್ಲಿ ಹರಿಹರ 2599, ಜಗಳೂರು 2662, ದಾವಣಗೆರೆ 5664, ಹೊನ್ನಾಳಿ 2482, ಚನ್ನಗಿರಿ 3672, ನ್ಯಾಮತಿ 2329 ಆಸ್ತಿಗಳಿವೆ. ಇದರಲ್ಲಿ 10956 ಆಸ್ತಿಗಳನ್ನು ಗುರುತಿಸಿ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಉಳಿದ 8452 ಆಸ್ತಿಗಳನ್ನು ರಕ್ಷಣೆ ಮಾಡಲು ತಿಳಿಸಿದರು.
ಕಂದಾಯ ಗ್ರಾಮ
ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಲು 81 ಪ್ರಸ್ತಾವನೆಗಳಿದ್ದು ಇವುಗಳಲ್ಲಿ ಈಗಾಗಲೇ 35 ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇನ್ನುಳಿದ ಗ್ರಾಮಗಳನ್ನು ಆದಷ್ಟು ಬೇಗನೆ ಅಧಿಸೂಚನೆ ಹೊರಡಿಸಲು ಕ್ರಮಕೈಗೊಳ್ಳಲು ಸೂಚನೆ ನೀಡಿದರು.
ಇ-ಆಫೀಸ್
ಕಂದಾಯ ಇಲಾಖೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲಾ ಹಂತದಲ್ಲಿ ಆಡಳಿತವನ್ನು ಇ-ಕಚೇರಿ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. ಜೂನ್ 13 ರವರೆಗೆ 225952 ಅರ್ಜಿಗಳನ್ನು ಸ್ವೀಕರಿಸಿ 220847 ಅರ್ಜಿಗಳನ್ನು ಕ್ರಮಕ್ಕಾಗಿ ಕಳುಹಿಸಿದ್ದು 16428 ಕಳುಹಿಸಲು ಬಾಕಿ ಮತ್ತು 63399 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ಕಡತಗಳಲ್ಲಿ 25391 ಕಡತ ತೆರೆಯಲಾಗಿದ್ದು ಒಟ್ಟು 74709 ಸ್ವೀಕರಿಸಿ ಮುಂದಿನ ಹಂತಕ್ಕೆ ಕಳುಹಿಸಲಾಗಿದೆ. ಇದರಲ್ಲಿ 9621 ಬಾಕಿ, 12643 ಇತ್ಯರ್ಥ ಮಾಡಿದ್ದು 2062 ಪ್ರಗತಿಯ ಹಂತದಲ್ಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243