ದಿನದ ಸುದ್ದಿ
ತುರ್ತುಸ್ಥಿತಿಯಲ್ಲಿ ವ್ಯಾಟ್ಸಪ್, ಫೇಸ್‌ಬುಕ್ ಬಂದ್; ಹಿಂಸಾಚಾರ ಘಟನೆ ಹತೋಟಿಗೆ ಕ್ರಮ
ಸುದ್ದಿದಿನ ಡೆಸ್ಕ್
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಹಿತದೃಷ್ಟಿ, ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವ್ಯಾಟ್ಸಪ್ ಟೆಲಿಗ್ರಾಫ್, ಇನ್ಸ್ಟಾಗ್ರಾಮ್ ಬಂದ್ ಮಾಡುವ ಚಿಂತನೆ ಹೊಂದಿದೆ. ಜನ ಹಿಂಸಾಚಾರ ಘಟನೆಗಳ ಹತೋಟಿ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ನಿರ್ಬಂಧ ಹೇರಲು ನಿರ್ಧರಿಸಿದೆ.
ಐಟಿ ಕಾಯ್ದೆಯ 69ಎ ಸೆಕ್ಷನ್ ಅಡಿ ಪಾಪ್ಯುಲರ್ ಮೊಬೈಲ್ ಆ್ಯಪ್ ಗಳನ್ನು ಕೇಂದ್ರ ಟೆಲಿಕಾಮ್ ಇಲಾಖೆ ಚಿಂತನೆ ನಡೆಸಿದೆ. ಜುಲೈ 18ರಂದು ಟೆಲಿಕಾಂ ಆಪರೇಟರ್, ದಿ ಇಂಟರ್ನೆಟ್ ಸರ್ವೀಸ್ ಪ್ರವೈಡರ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್ಪಿಎಐ), ಮೊಬೈಲ್ ಇಂಡಸ್ಟ್ರಿ ಬಾಡಿ ಸೆಲ್ಯುಲರ್ ಆಪರೇಟರ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ)ಗಳಿಗೆ ಟೆಲಿಕಾಮ್ ಇಲಾಖೆ ಪತ್ರ ರವಾನಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401