ರಾಜಕೀಯ
ಗೌಡರ ‘ಗಿಮಿಕ್ ಪಾಲಿಟಿಕ್ಸ್’
ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಕಾವು ಬೇಸಿಗೆಯ ಬಿರು ಬಿಸಿಲಿಗಿಂತ ಹೆಚ್ಚಾಗಿ ಕಾವೇರಿದೆ. ರಾಜ್ಯದ ದಿಗ್ಗಜ ರಾಜಕೀಯ ನಾಯಕರು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೆ ಬೇಕೆಂದು ಪಣ ತೊಟ್ಟು ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದಾರೆ. ಈಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ರಾಮನಗರ ರಾಜಕೀಯ ಚುನಾವಣೆಗೂ ಮುಂಚೆಯೇ ಪರೋಕ್ಷ ಫಲಿತಾಂಶ ಹರಬಿದ್ದಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ
ಕುಮಾರ ಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಈ ಬಾರಿ ರಾಜಕೀಯ ಚದುರಂಗಕ್ಕೆ ಗೋಲಿ ಹೋಡೆದಿದ್ದಾರೆ. ರಾಮನಗರದಲ್ಲಿ ಈ ಬಾರಿ ಜಿದ್ದಾ ಜಿದ್ದಿ ಎಲೆಕ್ಷನ್ ನಡೆಯುತ್ತದೆ ಎಂದು ಭಾವಿಸಿದವರು ಬಾಯ್ಮುಚ್ಚಿ ಕುಳಿತ್ತಿದ್ದಾರೆ. ರಾಜಕೀಯ ಬದ್ದ ವೈರಿಗಳೆಂದೆ ಭಾವಿಸಿದ್ದ ಈ ನಾಯಕರು ಸದ್ದಿಲ್ಲದೆ ಒಳ ರಾಜಕೀಯ ಮಾಡುತ್ತಿದ್ದಾರೆ ಎಂಬ ಮಾತು ರಾಮನಗರ ರಾಜಕೀಯದಲ್ಲಿ ಕೇಳಿಬರುತ್ತಿದೆ.
ಇದಕ್ಕೆ ಪೂರಕವೆಂಬತೆ ಕನಕಪುರದಲ್ಲಿ ನಾಮಕಾವಸ್ಥೆಗೆ ಜೆಡಿಎಸ್ ಆಭ್ಯಥಿಯನ್ನಾಗಿ ನಾರಯಣಗೌಡರನ್ನು ಕಣಕ್ಕಿಳಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಅಲ್ಲದೆ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಅವರನ್ನು ಕಣಕಿಳಿಸಿದ್ದಾರೆ ಡಿಕೆಶಿ ಎರಡು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಲ್ಲಿ ತಮ್ಮ ಡಮ್ಮಿ ಅಭ್ಯರ್ಥಿಗಳ ಮುಂದೆ ರಾಜಕೀಯ ಮಾಡುತ್ತಿದ್ದಾರೆ. ಇನ್ನೂ ಚನ್ನ ಪಟ್ಟಣದ ವಿಚಾರಕ್ಕೆ ಬಂದರೆ ಕಾಂಗ್ರೆಸ್‌ನಿಂದ ಸಾರಿಗೆ ಸಚಿವ ಎಚ್ ಎಮ್ ರೇವಣ್ಣ ಅವರನ್ನು ಅಭ್ಯರ್ಥಿಯಾಗಿ ಮಾಡಿ ಬಲಿಪಶುವಮಾಡಿದ್ದಾರೆ. ಏಕೆಂದರೆ ಈ ಭಾರಿ ಶತಾಯಗತಾಯ. ಚನ್ನಪಟ್ಟಣದಲ್ಲಿ ಸಿಪಿ ಯೋಗೆಶ್ವರ್ ಅವರನ್ನು ಸೋಲಿಸಲೇ ಬೇಕೆಂದು ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ತೆರೆಮರೆಯಲ್ಲಿ ಆಟವಾಡುತ್ತಿದ್ದಾರೆ. ಸ್ವಹಿತ ರಾಜಕೀಯಕ್ಕೆ ಇಬ್ಬರು ನಾಯಕರು ರಾಮನಗರದ ಜನರನ್ನು ಮೂರ್ಖರನ್ನಗಿ ಮಾಡುತ್ತಿದ್ದಾರೆ. ಈ ಇಬ್ಬರು ನಾಯಕರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ರಾಜ್ಯದಲ್ಲಿ ಪ್ರಬಲ ಒಕ್ಕಲಿಗ ನಾಯಕರಾಗಿದ್ದಾರೆ. ಇನ್ನೂ ಯೋಗೇಶ್ವರ್ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಇವರು ಪ್ರಬಲಾಗದಂತೆ ಮಾಡುವುದೆ ಇವರ ಉದ್ದೇಶವಾಗಿದೆ.
ರಾಮನಗರದಲ್ಲಿ ಇದುವರೆಗೂ ಬೇರೆ ನಾಯಕರು ಬೆಳೆಯದ ಹಾಗೆ ನೋಡಿ ಕೊಂಡಿರು ಎಚ್ಡಿಕೆ ಮುಂದಿನ ದಿನಗಳಲ್ಲಿ ರಾಮನಗರವನ್ನು ತನ್ನ ಕುಟುಂಬ ರಾಜಕೀಯಕ್ಕೆ ಕೇಂದ್ರವಾಗಿ ಮಾಡಿಕೋಳ್ಳೊ ಸಾಧ್ಯತೆಯನ್ನು ತಳ್ಳಿ ಹಾಕುವ ಹಾಗಿಲ್ಲ. ಇನ್ನೂ ಕನಕಪುರದಲ್ಲಿಯು ಸಹ ಇದುವರೆಗೂ ಯಾವ ನಾಯಕರು ಬೆಳೆಯದಂತೆ ನೋಡಿಕೊಂಡಿರು ಡಿಕೆಶಿ ಅಧಿಕಾರವನ್ನು ತನ್ನ ಕುಟುಂಬದಲ್ಲೇ ಹಿಡಿತದಲ್ಲೆ ಇಟ್ಟುಕೊಂಡಿದ್ದಾರೆ. ಕನಕಪುರದ ಜನ ಇವರ ಅಧಿಕಾರದ ದರ್ಪಕ್ಕೆ ಹೆದರಿ ಇವರ ವಿರುದ್ದ ತಿರುಗಿಬೀಳುವ ಸಾಹಸಕ್ಕೆ ಕೈಹಾಕಿಲ್ಲ. ಅಭಿವೃದ್ಧಿ ಹೆಸರಲ್ಲಿ ಕನಕಪುರದ ಎಲ್ಲಾ ಸರ್ಕಾರಿ ಕಾಮಗಾರಿಗಳ ಗುತ್ತಿಗೆಗಳನ್ನು ತನ್ನ ಚೇಲಾಗಳಿಗೆ ಮೀಸಲಿಟ್ಟಿರುವ ಡಿಕೆಶಿ ಸರ್ಕಾರದ ಕೆಲಸಗಳನ್ನು ತನ್ನ ಸಂಭಂದಿಗಳಿಗೆ ಮಿಸ್ ಅಗದ ಹಾಗೇ ನೋಡಿಕೊಂಡಿದ್ದಾರೆ. ತನಗೆ ಬೇಕಾದ ಅಧಿಕಾರಿಗಳನ್ನೆ ಕನಕಪುರದಲ್ಲಿ ಹಾಕಿಸಿಕೊಂಡು ಕನಕಾಸುರನಾಗಿ ಮೆರೆಯುತ್ತಿರುವ ಡಿಕೆಶಿಗೆ ಅಲ್ಲಿನ ಜನ ತಿರುಗಿ ಬೀಳದೆ ಇದ್ದರೆ ಕೋಟಿಗಟ್ಟಲೆ ಸಂಪಾದಿಸಿ ಮುಂದಿನ ಚುನಾವಣೆ ವೇಳೆಗೆ 5000 ಸಾವಿರ ಕೋಟಿಯ ಆಸ್ತಿಯನ್ನು ಘೋಷಿಸಿದರು ಆಶ್ಚರ್ಯ ಪಡಬೇಕಾಗಿಲ್ಲ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401