ದಿನದ ಸುದ್ದಿ
ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ;
ಸುದ್ದಿದಿನ ಡೆಸ್ಕ್: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ವಿಶೆಷ ತನಿಖಾ ದಳ (ಎಸ್ಐಟಿ) ಬೆಳಗಾವಿಯಲ್ಲಿ ಬುಧವಾರ ಬಂಧಿಸಿದ್ದು, ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದ ತನಿಖೆಗಾಗಿ ಮೂವರನ್ನು ಕರೆದೊಯ್ದಿದೆ. ಬೆಳಗಾವಿಯ ಮರಾಠವಾಡ ರಸ್ತೆಯ ಸಾಂಭಾಜಿ ಗಲ್ಲಿಯ ಭರತ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಪರಶುರಾಮ ವಾಗ್ಮರೆಯನ್ನು ಜುಲೈನಲ್ಲಿ ಖಾನಾಪುರ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ವಿಚಾರಣೆ ನಡೆಸಲಾಗಿತ್ತು.