ದಿನದ ಸುದ್ದಿ
ಅವಧಿ ಪೂರ್ಣಗೊಳ್ಳದ ಗ್ರಾ.ಪಂ ಹೊರತುಪಡಿಸಿ ಚುನಾವಣೆ
ಸುದ್ದಿದಿನ,ದಾವಣಗೆರೆ : ದಾವಣಗೆರೆ, ಜಗಳೂರು ಮತ್ತು ಹೊನ್ನಾಳಿ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಅವಧಿ ಪೂರ್ಣಗೊಳ್ಳದಿರುವ ಗ್ರಾಮ ಪಂಚಾಯ್ತಿಗಳನ್ನು ಹೊರತುಪಡಿಸಿ ಅವಧಿ ಪೂರ್ಣಗೊಂಡಿರುವ ಎಲ್ಲಾ ಗ್ರಾ.ಪಂ ಗಳ ಎಲ್ಲಾ ಚುನಾವಣಾ ಕ್ಷೇತ್ರಗಳಿಂದ ಗ್ರಾ.ಪಂ ಗಳಿಗೆ ಸದಸ್ಯರ ಸ್ಥಾನವನ್ನು ತುಂಬಲು ಮೊದಲ ಹಂತದಲ್ಲಿ ಚುನಾವಣೆ ನಡೆಸಲಾಗುವುದು.
ಕರ್ನಾಟಕ ಪಂಚಾಯತ್ ರಾಜ್(ಚುನಾವಣೆಗಳನ್ನು ನಡೆಸುವ)ನಿಯಮಗಳು 1993ರ 12ನೇ ನಿಯಮಕ್ಕನುಸಾರವಾಗಿ ದಾವಣೆಗೆರೆ ಜಿಲ್ಲೆಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಈ ಕೆಳಕಂಡಂತೆ ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಿರುತ್ತಾರೆ.
ಡಿ.11 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನವಾಗಿರುತ್ತದೆ. ಡಿ.12 ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿರುತ್ತದೆ. ಡಿ.14 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಡಿ.22 ಮತದಾನ ಅವಶ್ಯವಿದ್ದರೆ, ಮತದಾನವನ್ನು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ನಡೆಸಬೇಕಾದ ದಿನಾಂಕ ಮತ್ತು ದಿನವಾಗಿರುತ್ತದೆ. ಡಿ.31 ಚುನಾವಣೆಯ ಮುಕ್ತಾಯ ದಿನಾಂಕವಾಗಿರುತ್ತದೆ.
ಅವಧಿ ಪೂರ್ಣಗೊಳ್ಳದ ಗ್ರಾ.ಪಂ ವಿವರ
ದಾವಣಗೆರೆ ತಾಲ್ಲೂಕಿನ ಬೇತೂರು, ಕನಗೊಂಡನಹಳ್ಳಿ, ಕುಕ್ಕುವಾಡ ಮತ್ತು ಮಾಯಕೊಂಡ. ಹೊನ್ನಾಳಿ ತಾಲ್ಲೂಕಿನ ಹೆಚ್-ಕಡದಕಟ್ಟೆ ಈ ಗ್ರಾ.ಪಂ ಗಳು ಅವಧಿ ಪೂರ್ಣಗೊಳ್ಳದ ಕಾರಣ ಚುನಾವಣಾ ಪ್ರಕ್ರಿಯೆಯಿಂದ ಕೈಬಿಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243