ದಿನದ ಸುದ್ದಿ
ದಾವಣಗೆರೆ | ಗ್ರಾ.ಪಂ ಚುನಾವಣೆಯ ಮೊದಲ ಹಂತದ ಮತದಾನದ ಕಂಪ್ಲೀಟ್ ಡೀಟೆಲ್ಸ್
ಸುದ್ದಿದಿನ,ದಾವಣಗೆರೆ : ಮೊದಲ ಹಂತದ ಗ್ರಾ.ಪಂ ಸಾರ್ವತ್ರಿಕ ಚುನಾವಣೆಯು ಜಿಲ್ಲೆಯ ದಾವಣಗೆರೆ, ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕಿನ ಗ್ರಾ.ಪಂಗಳಲ್ಲಿ ಡಿ.22 ಮಂಗಳವಾರದಂದು ನಡೆಯಿತು. ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ವಿವರಗಳು ಈ ಕೆಳಕಂಡಂತೆ ಇದೆ.
ದಾವಣಗೆರೆ ತಾಲ್ಲೂಕಿನ 38 ಗ್ರಾ.ಪಂ ಗಳಿಗೆ ಚುನಾವಣೆ ನಡೆಯಲಿದ್ದು ಒಟ್ಟು 275 ಮತಗಟ್ಟೆಗಳ ಪೈಕಿ 260 ಮತಗಟ್ಟೆಗಳಲ್ಲಿ, ಹೊನ್ನಾಳಿ ತಾಲ್ಲೂಕಿನ 28 ಗ್ರಾ.ಪಂ ಗಳ ಒಟ್ಟು 153 ಮತಗಟ್ಟೆಗಳ ಪೈಕಿ 147 ಮತಗಟ್ಟೆಗಳಲ್ಲಿ ಹಾಗೂ ಜಗಳೂರು ತಾಲ್ಲೂಕಿನ 22 ಗ್ರಾ.ಪಂ ಗಳ ಒಟ್ಟು 219 ಮತಗಟ್ಟೆಗಳ ಪೈಕಿ 172 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಒಟ್ಟಾರೆ 88 ಗ್ರಾ.ಪಂ ಗಳ 647 ಮತಗಟ್ಟೆಗಳ ಪೈಕಿ 579 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ದಾವಣಗೆರೆ ತಾಲ್ಲೂಕಿನ 38 ಗ್ರಾ.ಪಂಗಳಲ್ಲಿ 281 ಸಾಮಾನ್ಯ 300 ಮಹಿಳೆ ಒಟ್ಟು 581 ಸ್ಥಾನಗಳಿವೆ. 80 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು 2 ಸ್ಥಾನಗಳು ನಾಮಪತ್ರ ಸಲ್ಲಿಸದೇ ಖಾಲಿ ಇದ್ದು ಒಟ್ಟು 499 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಗಳೂರು ತಾಲ್ಲೂಕಿನ 22 ಗ್ರಾ.ಪಂ ಗಳಲ್ಲಿ 194 ಸಾಮಾನ್ಯ, 203 ಮಹಿಳೆ ಒಟ್ಟು 397 ಸ್ಥಾನಗಳಿದ್ದು 100 ಅವಿರೋಧ ಆಯ್ಕೆಯಾಗಿದ್ದು 297 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಹೊನ್ನಾಳಿ ತಾಲ್ಲೂಕಿನ 28 ಸ್ಥಾನಗಳಲ್ಲಿ 155 ಸಾಮಾನ್ಯ, 168 ಮಹಿಳೆ ಒಟ್ಟು 323 ಸ್ಥಾನಗಳಿದ್ದು 31 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದು 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲದೇ ಒಟ್ಟು 291 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟಾರೆ ಮೊದಲನೇ ಹಂತದಲ್ಲಿ 88 ಗ್ರಾ.ಪಂ 630 ಸಾಮಾನ್ಯ, 671 ಮಹಿಳೆ ಒಟ್ಟು 1301 ಸ್ಥಾನಗಳಲ್ಲಿ 211 ಅವಿರೋಧ ಆಯ್ಕೆ, 3 ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಕೆ ಇಲ್ಲದೇ ಒಟ್ಟು 1087 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಶೇಕಡಾವಾರು
ಮೊದಲ ಹಂತದ ಒಟ್ಟು ಮತದಾನ- 85.27%
ದಾವಣಗೆರೆ- 85.54%
ಜಗಳೂರು- 83.96%
ಹೊನ್ನಾಳಿ- 86.32%
ಸುದ್ದಿದಿನ.ಕಾಂ|ವಾಟ್ಸಾಪ್|9980346243