ದಿನದ ಸುದ್ದಿ
ದಾವಣಗೆರೆ | ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳು
ಸುದ್ದಿದಿನ, ದಾವಣಗೆರೆ: ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 275 ಮತಗಟ್ಟೆಗಳಿದ್ದು, 37 ಸೂಕ್ಷ್ಮ, 18 ಅತಿ ಸೂಕ್ಷ್ಮ ಮತ್ತು 220 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 153 ಮತಗಟ್ಟೆಗಳಿದ್ದು 17 ಸೂಕ್ಷ್ಮ, 32 ಅತಿ ಸೂಕ್ಷ್ಮ, 104 ಸಾಮಾನ್ಯ ಮತಗಟ್ಟೆಗಳಿವೆ. ಜಗಳೂರು ತಾಲ್ಲೂಕಿನಲ್ಲಿ 219 ಮತಗಟ್ಟೆಗಳಿದ್ದು, 45 ಸೂಕ್ಷ್ಮ, 16 ಅತಿ ಸೂಕ್ಷ್ಮ ಮತುತ 158 ಸಾಮಾನ್ಯ ಮತಗಟ್ಟೆಗಳಿವೆ.
ಚನ್ನಗಿರಿ ತಾಲ್ಲೂಕಿನಲ್ಲಿ 368 ಮತಗಟ್ಟೆಗಳಿದ್ದು 45 ಸೂಕ್ಷ್ಮ, 47 ಅತಿ ಸೂಕ್ಷ್ಮ ಮತ್ತು 276 ಸಾಮಾನ್ಯ ಮತಗಟ್ಟೆಗಳಿವೆ. ಹರಿಹರ ತಾಲ್ಲೂಕಿನಲ್ಲಿ 167 ಮತಗಟ್ಟೆಗಳಿದ್ದು 17 ಸೂಕ್ಷ್ಮ, 17 ಅತಿ ಸೂಕ್ಷ್ಮ ಮತ್ತು 133 ಸಾಮಾನ್ಯ ಮತಗಟ್ಟೆಗಳಿವೆ. ನ್ಯಾಮತಿ ತಾಲ್ಲೂಕಿನಲ್ಲಿ 97 ಮತಗಟ್ಟೆಗಳಿದ್ದು 11 ಸೂಕ್ಷ್ಮ, 15 ಅತಿ ಸೂಕ್ಷ್ಮ ಮತ್ತು 71 ಸಾಮಾನ್ಯ ಮತಗಟ್ಟೆಗಳಿವೆ ಜಿಲ್ಲೆಯಲ್ಲಿ ಒಟ್ಟು 1279 ಮತಗಟ್ಟೆಗಳಿದ್ದು 172 ಸೂಕ್ಷ್ಮ, 145 ಅತಿ ಸೂಕ್ಷ್ಮ ಮತ್ತು 962 ಸಾಮಾನ್ಯ ಮತಗಟ್ಟೆಗಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243