ದಿನದ ಸುದ್ದಿ
ಗ್ರಾಮ ಪಂಚಾಯತಿ ಕಾರ್ಯದರ್ಶಿ ಉಪನೋಂದಣಾಧಿಕಾರಿಯಾಗಿ ನೇಮಕ
ಸುದ್ದಿದಿನ,ದಾವಣಗೆರೆ:ಜನನ, ಮರಣ ನೋಂದಣಿಗೆ ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿಯನ್ನು ಜನನ, ಮರಣ ಉಪನೋಂದಣಾಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಿಸಲಾಗಿದೆ.
2024 ಜುಲೈ 1 ರಿಂದ ಗ್ರಾಮೀಣ ಪ್ರದೇಶದಲ್ಲಿ ಜನನ, ಮರಣಗಳ ನೋಂದಣಿಯನ್ನು ಗ್ರಾಮ ಪಂಚಾಯತಿಯಲ್ಲಿ ನೋಂದಣಿ ಮಾಡಲಾಗುತ್ತಿದ್ದು ಜನನ, ಮರಣ ಘಟನೆಗಳು ಘಟಿಸಿದ 21 ದಿನಗಳೊಳಗಾಗಿ ನೋಂದಾಯಿಸಿ ಉಚಿತವಾಗಿ ಪ್ರಮಾಣ ಪತ್ರ ಪಡೆಯಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243