ದಿನದ ಸುದ್ದಿ
ದಾವಣಗೆರೆ | ಗ್ರಾ.ಪಂ ಚುನಾವಣೆ : ಮತದಾರರ ಪಟ್ಟಿ ಪ್ರಕಟ
ಸುದ್ದಿದಿನ,ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾ.ಪಂ ಸಾರ್ವತ್ರಿಕ ಚುನಾವಣೆ 2020 ರ ಸಂಬಂಧ ದಿನಾಂಕ 31-08-2020 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರತಿಯೊಂದು ಕ್ಷೇತ್ರದ ಮತಗಟ್ಟೆಯಲ್ಲಿ, ಗ್ರಾ.ಪಂ ಕಚೇರಿ, ತಾಲ್ಲೂಕು ಕಚೇರಿ ಹಾಗೂ ಇತರೇ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದ್ದು ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.ಗ್ರಾಮ ಪಂಚಾಯಿತಿಗಳ ಸಂಖ್ಯೆ ಹಾಗೂ ಮತಗಟ್ಟೆಗಳ ಸಂಖ್ಯೆ ಈ ಕೆಳಕಂಡಂತೆ ಇದೆ.
ಕ್ರ.ಸಂ ತಾಲ್ಲೂಕಿನ ಹೆಸರು ಒಟ್ಟು ಗ್ರಾ.ಪಂ ಗಳ ಸಂಖ್ಯೆ ಒಟ್ಟು ಮತಗಟ್ಟೆಗಳ ಸಂಖ್ಯೆ
- ದಾವಣಗೆರೆ 45 242
- ಹರಿಹರ 24 134
- ಹೊನ್ನಾಳಿ 29 305
- ನ್ಯಾಮತಿ 18 130
- ಚನ್ನಗಿರಿ 61 90
- ಜಗಳೂರು 22 189
ಒಟ್ಟು 196 1090
ಮತದಾರರ ವಿವರ: ದಾವಣಗೆರೆ ತಾಲ್ಲೂಕು ಪುರುಷ ಮತದಾರರ ಸಂ: 99709, ಮಹಿಳಾ ಸಂಖ್ಯೆ: 98354 ಒಟ್ಟು 198063. ಹರಿಹರ ಕ್ಷೇತ್ರದ ಪುರುಷ ಮತದಾರರ ಸಂ: 58793, ಮಹಿಳಾ ಸಂ: 57455 ಒಟ್ಟು 116248. ಚನ್ನಗಿರಿ ಕ್ಷೇತ್ರದ ಪುರುಷ ಮತದಾರರ ಸಂಖ್ಯೆ: 121018, ಮಹಿಳಾ ಸಂ: 117566 ಒಟ್ಟು 238584. ಹೊನ್ನಾಳಿ ಕ್ಷೇತ್ರದ ಪುರುಷ ಮತದಾರರ ಸಂ: 54458, ಮಹಿಳಾ ಸಂ: 53313 ಒಟ್ಟು 107771. ನ್ಯಾಮತಿ ಕ್ಷೇತ್ರದ ಪುರುಷ ಮತದಾರರ ಸಂ: 35551, ಮಹಿಳಾ ಸಂ: 34821 ಒಟ್ಟು 70372. ಜಗಳೂರು ಕ್ಷೇತ್ರದ ಮತದಾರರ ಸಂ: 66227, ಮಹಿಳಾ ಸಂ: 64437 ಒಟ್ಟು 130664 ಇದ್ದು ಈ ಎಲ್ಲಾ ಕ್ಷೇತ್ರದ ಇತರೆ ಮತದಾರರ ಸಂಖ್ಯೆ: 0 ಇರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243