ಲೈಫ್ ಸ್ಟೈಲ್

ಚಳಿಗಾಲದಲ್ಲಿ ಬಿಸಿ ಬಿಸಿಯಾದ ರುಚಿಕರವಾದ, ಆರೋಗ್ಯಕರವಾದ ಹಸಿರು ಕಟ್ಲೇಟ್

Published

on

ಹಸಿರು ಕಟ್ಲೇಟ್ ಮಾಡಲು ಬೇಕಾಗುವ ವಸ್ತುಗಳು

ಆಲೂಗಡ್ಡೆ – 200grms
ಹಸಿ ಬಟಾಣಿ –100 grms
ಬಸಳೆ ಸೊಪ್ಪು—2 ಬಟ್ಟಲು
ಹಸಿ ಮೆಣಸಿನಕಾಯಿ – 3,4
ನಿಂಬೆಹಣ್ಣು ಅರ್ಧ
ಗೋಡಂಬಿ — 8-10
ಶ್ಯಾವಿಗೆ – 30 grm
ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ

  • ಬಸಳೆ ಸೊಪ್ಪು ತೊಳೆದು, ನೀರು ಬೆರಸದೆ ನುಣ್ಣಗೆ ಅರೆದು ಬಟ್ಟಲಿನಲ್ಲಿ ತೆಗೆದಿಡಿ.
  • ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತಗೆದು, ಪುಡಿ ಮಾಡಿ ಇಡಿ.
  • ಹಸಿ ಬಟಾಣಿಯನ್ನು ಬೇಯಿಸಿರಿ.
  • ಮಿಕ್ಸಿಗೆ ಹಾಕಿ ಪುಡಿ ಮಾಡಿ ತೆಗೆದಿಡಿ.
  • ಹಸಿ ಮೆಣಸಿನಕಾಯನ್ನು ಅರೆಯಿರಿ.
  • ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ ಒಲೆಯ ಮೇಲಿಡಿ. ಎಣ್ಣೆ ಕಾದಾಗ, ಅರೆದಿಟ್ಟ ಬಸಳೆಯನ್ನು ಹಾಕಿ ಸೌಟಿನಿಂದ ಮಗಚುತ್ತಿರಿ. ರಸವೆಲ್ಲ ಇಂಗಿದ ನಂತರ ಆಲೂಗಡ್ಡೆ ಪುಡ್ಡಿ, ಕುಟ್ಟಿದ ಬಟಾಣೆ ಸೇರಿಸಿ ಮಗುಚಿರಿ.
  • ಅರೆದ ಹಸಿಮೆಣಸಿನಕಾಯಿ ಸೇರಿಸಿ ಒಂದು ನಿಮಿಷ ಬಿಟ್ಟು ಬಾಣಲೆಯನ್ನು ಒಲೆಯಿಂದ ಕೆಳಗಿಳಿಸಿ, ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ, ನಿಂಬೆರಸ ಸೇರಿಸಿ.ಹೂರಣವನ್ನು ಚೆನ್ನಾಗಿ ಕಲೆಸಿರಿ.
  • ಕಟ್ಲೇಟ್ ಆಕಾರದಲ್ಲಿ ಹೂರಣವನ್ನು ಸಿದ್ಧ ಪಡಿಸಿ.ಎರಡೂ ಬದಿಗೆ ಶ್ಯಾವಿಗೆ ಪುಡಿ ಸೇರಿಸಿ, ನಡುವೆ ಒಂದು ಗೋಡಂಬಿ ಇಟ್ಟು ಒತ್ತಿರಿ, ಎಣ್ಣೆಯಲ್ಲಿ ಕರಿಯಿರಿ. ಬಿಸಿ ಇರುವಾಗಲೇ ಟೊಮ್ಯಾಟೊ ಸಾಸ್ ಮತ್ತು ಪುದಿನಾ ಚಟ್ನಿ ಯೊಡನೆ ತಿನ್ನಲು ಕೊಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version