ದಿನದ ಸುದ್ದಿ

ಇಂದು ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ; ದುಡಿಯುವ ವರ್ಗಕ್ಕೆ ಗಣ್ಯರ ಶುಭಾಶಯ

Published

on

ಸುದ್ದಿದಿನ ಡೆಸ್ಕ್ : ಇಂದು ಅಂತರಾಷ್ಟ್ರೀಯ ಕಾರ್ಮಿಕರ ದಿನ. ಇದರ ಅಂಗವಾಗಿ ದೇಶಾದ್ಯಂತ ಶ್ರಮಜೀವಿಗಳ ದಿನ ಆಚರಿಸುವ ಮೂಲಕ ಆ ವರ್ಗಕ್ಕೆ ಶುಭಾಶಯಗಳನ್ನು ತಿಳಿಸಲಾಗುತ್ತದೆ.

ಈ ವಿಶೇಷ ದಿನದಂದು ಕಾರ್ಮಿಕರ ಶ್ರಮ ಸಮರ್ಪಣೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಅವರು ನೀಡುವ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳ ಬಗ್ಗೆ ಈ ದಿನ ಅರಿವು ಕೂಡ ಮೂಡಿಸಲಾಗುತ್ತದೆ.

ಕಾರ್ಮಿಕರ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.

ಶ್ರಮಿಕ ವರ್ಗಕ್ಕೆ ಶುಭಾಶಯ ಕೋರಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದ ಪ್ರಗತಿಗೆ ಕಾರ್ಮಿಕ ವರ್ಗ ಅಪಾರ ಕೊಡುಗೆ ನೀಡುತ್ತಿದೆ. ಅವರ ಪರಿಶ್ರಮ ಮತ್ತು ಬದ್ಧತೆ ಸ್ಮರಣೀಯವಾದದ್ದು, ಈ ದಿನದ ಅಂಗವಾಗಿ ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ಅನಂತ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version