ರಾಜಕೀಯ

ಭಾರತ ಮತ್ತೊಮ್ಮೆ ಚಿನ್ನದ ಹಕ್ಕಿಯಾಗಿ ಹಾರಲಿದೆಯಂತೆ !

Published

on

ಸುದ್ದಿದಿನ ಡೆಸ್ಕ್: ಜಿ.ಎಸ್.ಟಿ. ತೆರಿಗೆ ಮತ್ತಷ್ಟು ಕಡಿಮೆಯಾಗಲಿದ್ದು, ಭಾರತ ಮತ್ತೊಮ್ಮೆ ಚಿನ್ನದ ಹಕ್ಕಿಯಾಗಿ ಹಾರಲಿದೆ ಎಂದು ಆರ್ಥಿಕ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ

ಲೋಕಸಭೆಯಲ್ಲಿ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಪಡೆಯುವ ಮುನ್ನ ಮಾತನಾಡಿದ ಅವರು, ಈ ವಿಷಯ ಕುರಿತು ಪ್ರಸ್ತಾಪಿಸಿದ್ದಾರೆ.
ಮುಂದೆ ಇನ್ನಷ್ಟು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸುವುದರಿಂದ ಮಾರಾಟ ಹೆಚ್ಚಾಗಿ, ಆದಾಯವೂ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲು ಸಾಧ್ಯ ಎಂದಿದ್ದಾರೆ.

ಸದ್ಯ 384 ವಸ್ತುಗಳು ಹಾಗೂ 68 ಸೇವೆಗಳಲ್ಲಿನ ಜಿಎಸ್‌ಟಿ ದರವನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜಿ.ಎಸ್.ಟಿ. ಯಲ್ಲಿರುವ ಗೊಂದಲಗಳಿಂದ ಮೊದಲಿಗೆ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *

Trending

Exit mobile version