ದಿನದ ಸುದ್ದಿ

ದಸರೆಗಾಗಿ 25 ಕೋಟಿ ಅನುದಾನ ಕೇಳಿದ ಜಿಟಿಡಿ

Published

on

ಸುದ್ದಿದಿನ ಡೆಸ್ಕ್: ಈ ಬಾರಿಯ ಮೈಸೂರು ದಸರಾಕ್ಕೆ ಸರಕಾರಕ್ಕೆ 25 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ .ಟಿ .ದೇವೇಗೌಡ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ದಸರಾ- 2018 ಕಾರ್ಯಕಾರಿ ಸಮಿತಿಯ ಸಭೆ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕಳೆದ ಬಾರಿ ದಸರಾಕ್ಕೆನೀಡಿದ 15 ಕೋಟಿ ರೂಪಾಯಿ ಅನುದಾನ ಖರ್ಚಾಗಿದೆ. ಈ ಬಾರಿ 25 ಕೋಟಿ ರೂ. ಗೆ ಪ್ರಸ್ತಾವನೆ ಕಳುಹಿಸಲಾಗುವುದು. ವಿವಿಧ ಇಲಾಖೆಗಳ ಜೊತೆ ಗೂಡಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಈ ಬಾರಿ 16 ದಸರಾ ಉಪಸಮಿತಿ ರಚಿಸಲಾಗುವುದು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನ ಕಾರ್ಯಕರ್ತರು ಸೇರಿದಂತೆ 20 ರಿಂದ 25 ಮಂದಿಗೆ ಸಮಿತಿ ಒಂದಕ್ಕೆ ಅವಕಾಶ ನೀಡಲಾಗುವುದು ಈಗಾಗಲೇ ಪಕ್ಷದ ಅಧ್ಯಕ್ಷರಿಗೆ ಕಾರ್ಯಕರ್ತರ ಪಟ್ಟಿ ಕಳಿಸಿ ಕೊಡಲು ತಿಳಿಸಲಾಗಿದೆ ಎಂದರು.

ದಸರಾ ಕಾರ್ಯಕ್ರಮದ ಪಟ್ಟಿಯನ್ನು ಸೆಪ್ಟೆಂಬರ್ 25ಕ್ಕೆ ಅಂತಿಮಗೊಳಿಸಲಾಗುವುದು. ಸೆ. 26 ರಂದು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದರು.

ಸಭೆಯಿಂದ ಹೊರನಡೆದ ಸಚಿವ ಪುಟ್ಟ ರಂಗ ಶೆಟ್ಟಿ: ಸಭೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿ ಪೋಸ್ಟರ್ ನಲ್ಲಿ ತಮ್ಮ ಫೋಟೋ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಬಳಿಕ ಅವರು ಸಭೆಯಿಂದ ನಿರ್ಗಮಿಸಿದರು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಜಿ ಟಿ ದೇವೇಗೌಡ ಅವರು ಭಾವಚಿತ್ರ ಇಲ್ಲದ ಬಗ್ಗೆ ಪುಟ್ಟರಂಗಶೆಟ್ಟಿ ಶೆಟ್ಟಿ ಗಮನಕ್ಕೆ ತಂದಿದ್ದಾರೆ. ಇದನ್ನು ಸರಿ ಪಡಿಸಲಾಗುವುದು. ಈ ಬಾರಿ ಮೈಸೂರು, ಚಾಮರಾಜನಗರದ ಎಲ್ಲಾ ಸಚಿವರನ್ನು ದಸರಾ ಉಪ ಸಮಿತಿ ಉಪಾಧ್ಯಕ್ಷರನ್ನಾಗಿ ಮಾಡಲು ಅಧಿಸೂಚನೆ ಹೊರಡಿಸಲಾಗುವುದು. ಶಾಸಕ ತನ್ವೀರ್ ಸೇಠ್ ಅವರು ಬೇರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರಣ ಸಭೆಯಲ್ಲಿ ಭಾಗವಹಿಸಿಲ್ಲ. ಕಾಂಗ್ರೆಸ್ ಶಾಸಕ ಯತಿಂದ್ರ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಹೇಳಿದರು.

ಈ ಬಾರಿ ಜಂಬೂ ಸವಾರಿ ಈ ಹಿಂದಿನಂತೆ ಒಂದೇ ದಿನ ಇರುತ್ತದೆ. ಆದರೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಭಾನುವಾರ ಒಂದು ದಿನ ಹೆಚ್ಚುವರಿ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗುವುದು. ಜಂಬೂಸವಾರಿಯ ರಿಹರ್ಸಲ್ ಇರುವುದಿಲ್ಲ ಎಂದರು.

ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಮಾತನಾಡಿ ಮಡಿಕೇರಿ ದಸರಾ ಆ ಯೋಜನೆ ಮಾಡುವ ಸಂಬಂಧ ಸ್ಥಳೀಯರ ಜೊತೆ ಚರ್ಚೆ ಮಾಡಲಾಗುತ್ತದೆ ಎಂದರು.

Leave a Reply

Your email address will not be published. Required fields are marked *

Trending

Exit mobile version