ದಿನದ ಸುದ್ದಿ
ಗ್ಯಾಂಗರಿನ್ ಖಾಯಿಲೆಯಿಂದ ಬಳಲುತ್ತಿರುವ ಅಥಿತಿ ಉಪನ್ಯಾಸಕ ಚೌಡೇಶ್ ಗೆ ಬೇಕಿದೆ ಆರ್ಥಿಕ ನೆರವು
ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ, ಸಂತೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿರುವ ಚೌಡೇಶ್ ಅವರು ಗ್ಯಾಂಗರೀನ್ ಖಾಯಿಲೆಯಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟ ದಲ್ಲಿದ್ದಾರೆ, ಅವರಿಗೆ ನೆರವು ನೀಡಲು ಕಾಳಿಜಿಯಿಂದ ಉದಯ್ ಇಟಗಿಯವರು ಮನವಿಮಾಡಿದ್ದಾರೆ.
ಎಲ್ಲರಿಗೂ ನಮಸ್ತೆ,
ಇವರು ಶ್ರೀ ಚೌಡೇಶ್ ಎಸ್. ಎಂಬವರು ದಾವಣಗೇರಿ ಜಿಲ್ಲೆಯ ಸಂತೆಬೆನ್ನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಆದರೆ ಪ್ರತಿಭಾವಂತ ಹುಡುಗ.
ಅವರು ತಮ್ಮ ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳನ್ನು ಕ್ಲೀಯರ್ ಮಾಡಿದ್ದು ಮುಂದಿನ recruitment ಗಾಗಿ ಕಾಯುತ್ತಿದ್ದಾರೆ. ಇವರು ಉತ್ತಮ ಉಪನ್ಯಾಸಕರಾಗಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಮತ್ತು ವಿದ್ಯಾರ್ಥಿಗಳ ಕಡೆಯಿಂದ ಉತ್ತಮ ಮೆಚ್ಚುಗೆಯನ್ನು ಗಳಿಸಿದ್ದಾರೆ. ಆದರೆ ದುರದೃಷ್ಟವಶಾತ್ ಅವರು ಕಳೆದ ನಾಲ್ಕು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಡೆಂಗ್ಯೂ ಮತ್ತು ಗ್ಯಾಂಗರೀನ್ ನಿಂದ ಬಳಲುತ್ತಿದ್ದಾರೆ.
ಕರೋನಾ ಸಾಂಕ್ರಾಮಿಕ ಪರಿಸ್ಥಿತಿ ಪ್ರಾರಂಭವಾದಾಗಿನಿಂದ ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಅಧ್ಯಾಪಕರಿಗೆ ವೇತನ ನೀಡಲಾಗಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಈಗ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಅವರ ಗ್ಯಾಂಗರಿನ್ ಕಾಯಿಲೆಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.
ಈಗಾಗಲೇ ಅವರ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಅವರಿಗೆ ಹಣದ ಸಹಾಯ ಮಾಡಿದ್ದಾರೆ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆಗಾಗಿ ಇನ್ನೂ ಹೆಚ್ಚಿನ ಹಣದ ಅವಶ್ಯಕತೆಯಿದೆ. ಆದ್ದರಿಂದ ನೀವು ನಿಮ್ಮ ಕೈಲಾದಷ್ಟು ಈ ವ್ಯಕ್ತಿಗೆ ಹಣದ ಸಹಾಯ ಮಾಡುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಈ ಕೆಟ್ಟ ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಸಹಾಯ ಮಾಡಲು ಕಷ್ಟವಾಗುವದೆಂದು ನನಗೆ ತಿಳಿದಿದೆ. ಆದರೆ ನೀವು ಮನಸ್ಸು ಮಾಡಿದರೆ ಇದು ಅಸಾಧ್ಯವೇನಲ್ಲ. ದಯವಿಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಹನಿಹನಿಗೂಡಿದರೆ ಹಳ್ಳ. ಆದ್ದರಿಂದ, ಈ ವ್ಯಕ್ತಿಗೆ ಸಹಾಯ ಮಾಡಲು ನಾವು ನಮ್ಮ ಕೈಗಳನ್ನು ಜೋಡಿಸೋಣ.
ಅವರ ಖಾತೆಯ ವಿವರಗಳು
Name: Choudesha. S
SB A/c No: 64131189398
IFSC Code: SBIN0040340
ದುಡ್ಡು ಕಳಿಸಿದ ತಕ್ಷಣ uday itagi & Pravara Kottur ಇನ್ಬಾಕ್ಸಿನಲ್ಲಿ ಒಂದು ಮೆಸೇಜ್ ಹಾಕಿ.
ಧನ್ಯವಾದ. ಒಂದು ರೂಪಾಯಿಗೂ ಬೆಲೆಯಿದೆ.. ನಮ್ಮಿಂದ ಸಾಧ್ಯವಾದ ಹಣವನ್ನು ಹಾಕಿ ಬಿಡೋಣ.
ಧನ್ಯವಾದಗಳು
ಉದಯ್ ಇಟಗಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243