ದಿನದ ಸುದ್ದಿ
ಖಾಯಮಾತಿ ಮಾಡಿ ಇಲ್ಲವೇ ದಯಾಮರಣ ಕೊಡಿ ; ಅತಿಥಿ ಉಪನ್ಯಾಸಕರ ಪತ್ರ ಚಳವಳಿ
ಸುದ್ದಿದಿನ, ದಾವಣಗೆರೆ : ಅಥಿತಿ ಉಪನ್ಯಾಸಕರು ಪತ್ರ ಚಳವಳಿಯ ಮೂಲಕ ತಮ್ಮ ಸೇವಾ ಖಾಯಮಾತಿಗಾಗಿ ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ನಡೆಯುತ್ತಿರುವ
ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಮುಷ್ಕರದ 28 ನೇ ದಿನವಾದ ಬುಧವಾರ, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರಪತಿಗಳಿಗೆ ‘ ತಮ್ಮ ಸೇವೆಯನ್ನು ಖಾಯಂಗೊಳಿಸಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಮಾಡಿಕೊಡಿ ಎಂದು ಪತ್ರ ಬರೆದು ಪ್ರತಿಭಟಿಸಿದರು.
ರಾಜ್ಯದಾದ್ಯಂತ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು, ವರ್ಷದಲ್ಲಿ ಹತ್ತು ತಿಂಗಳು ಗೌರವಧನ ಪಡೆಯುತ್ತಿದ್ದಾರೆ. ಕೆಲವೊಮ್ಮೆ ಹತ್ತು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಗೌರವಧನ ಪಡೆದಿದ್ದೇವೆ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.
ಈ ಹಿನ್ನೆಲೆಯಲ್ಲಿ ನಾವು ನವೆಂಬರ್ 23 ನೇ ತಾರೀಕಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದೇವೆ. ಆದರೆ ಸರ್ಕಾರ ಇದುವರೆಗೂ ಸ್ಪಂದಿಸದೆ ಇರುವುದು ನಮಗೆ ನೋವುಂಟು ಮಾಡಿದೆ ಎಂದರು.
ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ ಅದೇಶ ಹೊರಡಿಸುವವರೆಗೂ ನಮ್ಮ ಚಳವಳಿ ಮುಂದುವರೆಯುತ್ತದೆ ಎಂದು ಹೇಳಿದರು.
ಹಾಗಯೇ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಉರುಳು ಸೇವೆ ಮಾಡುವುದರ ಮೂಲಕ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶುಭ, ವೀಣಾ, ಶ್ಯಾಮ್ ಪ್ರಸಾದ್, ಮೋಹನ್, ಯತೀಶ್ ಸೇರಿದಂತೆ ಹಲವು ಅತಿಥಿ ಉಪನ್ಯಾಸಕರುಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243