ದಿನದ ಸುದ್ದಿ
ದಾವಣಗೆರೆ : ಸೆ. 27ರಂದು ಪದವಿ ಕಾಲೇಜು ‘ಅಥಿತಿ ಉಪನ್ಯಾಕರ ತರಗತಿ ಬಹಿಷ್ಕಾರ’
ಸುದ್ದಿದಿನ ಡೆಸ್ಕ್ : ಸೆ.27 ರಂದು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲು ಶುಕ್ರವಾರ ನಡಿಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಕೊಟ್ರೇಶ್.ಹೆಚ್, ಉಪಾಧ್ಯಕ್ಷರಾಗಿ ಶಂಕರಯ್ಯ, ಪ್ರಶಾಂತ್ ಶರ್ಮ, ಶಿವಕುಮಾರ್ ಯರಗಟ್ಟಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ದೇವೆಂದ್ರಪ್ಪ, ಕಾರ್ಯದರ್ಶಿಯಾಗಿ ಡಾ. ಪ್ರಭಾಕರ್, ಸಂತೋಷ್, ಸಂಘಟನಾ ಕಾರ್ಯದರ್ಶಿಗಳಾಗಿ ಧನಂಜಯ್.ಎಂ.ಆರ್, ರಾಘವೇಂದ್ರ.ಆರ್, ಬಸವರಾಜ್.ಎ.ಕೆ, ರಾಘವೇಂದ್ರ.ಎಂ.ಆರ್, ಸಹ ಕಾರ್ಯದರ್ಶಿಯಾಗಿ ಮೋಹನ್.ಕೆ, ರಾಜಕುಮಾರ್.ಸಿ, ಮಹಿಳಾ ಕಾರ್ಯದರ್ಶಿಯಾಗಿ ಪಿ.ವಿ.ಸಿದ್ಧಮ್ಮ, ಸಿ.ಮಂಜುಳಾ, ಡಾ.ಎ.ಎಂ ಭಾರತಿ, ಕಾನೂನು ಸಲಹೆಗಾರರಾಗಿ ಬಿ.ಎಸ್.ಗಣೇಶ್, ಪತ್ರಿಕಾ ಸಲಹೆಗಾರರಾಗಿ ಗಂಗಾಧರ್ ಡಿ.ಪಿ, ಚಂದ್ರಶೇಖರ್.ಕೆ, ಗಜೇಂದ್ರ ಇವರನ್ನು ನೇಮಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401