ರಾಜಕೀಯ
ಮೋದಿ ತರಹ ಢೋಂಗಿ ಬಜೆಟ್ ನಾನು ಮಂಡಿಸಲ್ಲ : ಎಚ್.ಡಿ.ಕೆ ವ್ಯಂಗ್ಯ
ಸುದ್ದಿದಿನ, ಬೆಂಗಳೂರು : ‘ಪ್ರಧಾನಿ ನರೇಂದ್ರ ಮೋದಿಯವರ ರೀತಿ ನಾನು ಢೊಂಗಿ ಬಜೆಟ್ ಅನ್ನು ಮಂಡಿಸುವುದಿಲ್ಲ. ನಾನು ಅತ್ಯುತ್ತಮವಾದ ಬಜೆಟ್ ಅನ್ನು ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇಂದು (ಸೋಮವಾರ) ಎಚ್.ಡಿ. ದೇವೇಗೌಡ ಅವರ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿದ ಅವರು ಬಜೆಟ್ ಸಿದ್ದತೆಯ ಬಗ್ಗೆ ಹಾಗೂ ಪ್ರಸ್ತುತ ರಾಜಕೀಯ ಬೆಳವಣಿಗೆಯ ಬಗೆಗೆ ಕುರತು ಸುದೀರ್ಘವಾದ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಜನರ ಪರವಾದಂತಹ ಬಂಜೆಟ್ ಮಾಡುತ್ತೇನೆಯೇ ಹೊರತು, ಪ್ರಧಾನಿ ಮೋದಿ ತರಹ ಢೋಂಗಿ ಬಜೆಟ್ ಮಂಡಿಸಿ ಜನತೆಗೆ ಮೋಸಮಾಡುವುದಿಲ್ಲ ಎಂದು ಕಿಡಿಕಾರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401