ದಿನದ ಸುದ್ದಿ
ಯತ್ನಾಳ್ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ : ಎಚ್.ಡಿ.ಕುಮಾರಸ್ವಾಮಿ ಕಿಡಿ
ಸುದ್ದಿದಿನ,ದಾವಣಗೆರೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ.ತಿಲಕ ಇಟ್ಟುಕೊಂಡು ತಿರಗುತ್ತಿರುವ ಯತ್ನಾಳ್ ಹಿಂದು ಧರ್ಮದ ಎನು ಅಂತಾ ಅರ್ಥ ಮಾಡಿಕೊಳ್ಳಲಿ.ನಾನು ಸಾವಿರಾರು ಕೋಟಿ ರೂಪಾಯಿ ಆಸ್ತಿಮಾಡಿದ್ದೇನೆ ಎನ್ನುತ್ತಿದ್ದಾರೆ. ಯತ್ನಾಳ್ ಬಳಿ ದಾಖಲೆಗಳಿದ್ದರೇ ಬಹಿರಂಗ ಪಡಿಸಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಾತಾಡಿದ ಅವರು,ಯತ್ನಾಳ್ ಸೇರಿದಂತೆ ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗಳು ಪ್ರತಿಕ್ರಿಯೆ ನೀಡಲು ಸಹ ಯೋಗ್ಯವಲ್ಲದ ಹೇಳಿಕೆಗಳು. ಇಂತಹ ವಿಚಾರದ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುವೆ. ನಾನು ಮಾಡಿದ ರೈತರ ಸಾಲಾ ಮನ್ನಾ ಯೋಜನೆಯಲ್ಲಿ ಹತ್ತಾರು ಗೊಂದಲ ಸೃಷ್ಠಿಸಿದ್ದಾರೆ. ನಾಡಿನಲ್ಲಿ ಒಂದು ರೀತಿ ವಿಚಿತ್ರ ವಾತಾವರಣವಿದೆ. ಈ ಎಲ್ಲ ವಿಚಾರದ ಬಗ್ಗೆ ಸದಸದಲ್ಲಿ ವಿಸ್ತಾರವಾಗಿ ಮಾತಾಡುವೆ ಎಂದರು.
ದೇಶದಲ್ಲಿ ಇಂದಿನ ವಾತಾವರಣ ಮಾತ್ರ ವಿಚಿತ್ರವಾಗಿದ್ದು. ಹೊರಗೆ ಹೋದವರು ಮನೆಗೆ ಬರುತ್ತಾರಾ ಎಂದು ಹೇಳುವುದು ಕಷ್ಟದ ಸ್ಥಿತಿ ಇದೆ. ಇದಕ್ಕೆ ದೆಹಲಿ ಘಟನೆ ನಿದರ್ಶನ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243