ರಾಜಕೀಯ
ಮಾಧ್ಯಮಗಳ ಮೇಲೆ ರೇವಣ್ಣ ಕೆಂಡ: ಏನು ವಿಷಯ ಗೊತ್ತಾ?
ಹಾಸನ: ಚನ್ನರಾಯಪಟ್ಟಣ ಸಿಪಿಐ ಹರೀಶ್ ಬಾಬು ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಎಚ್.ಡಿ.ರೇವಣ್ಣ ಮಾಧ್ಯಮಗಳ ಮೇಲೆ ಕೆಂಡಕಾರಿದ್ದಾರೆ.
ಚನ್ನರಾಯಪಟ್ಟಣ ಸಿಪಿಐ ಹರೀಶ್ ಬಾಬು ವರ್ಗಾವಣೆಗೆ ನಾನು ಪ್ರಭಾವ ಬೀರಲು ಹೋಗಿಲ್ಲ. ಈ ಕುರಿತು ಎಸ್ಪಿ ಮತ್ತು ಸಿಪಿಐ ಅವರನ್ನೇ ಕೇಳಿ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು.
ವಿಧಾನಸಭೆ ಚುನಾವಣೆ ಹೇಗೆ ನಡೆಯಿತು ಎಂಬುದಾಗಿ ತನಿಖೆ ನಡೆಸಲಿ. ನನ್ನ ಮಗ ಸೂರಜ್ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಚುನಾವಣೆ ವೇಳೆ ಸಿಪಿಐಯಿಂದ ಪಕ್ಷಪಾತಿ ನಡವಳಿಕೆ ಆಗಿತ್ತು. ಅವರನ್ನು ಸಸ್ಪೆಂಡ್ ಮಾಡಲು ಡಿಜಿ ನಿರ್ಧರಿಸಿದ್ದರು. ಆದರೆ ನಾನೇ ಬೇರೆಡೆ ಕಳಿಸುವಂತೆ ಹೇಳಿದೆ ಎಂದು ಪತ್ರಿಕೆಯಲ್ಲಿ ಬರೆದಿದ್ದಾರೆ. ಇದು ಸಲ್ಲದು. ನನ್ನನ್ನು ಸೋಲಿಸಲು ಇನ್ನಿಲ್ಲದ ಷಡ್ಯಂತ್ರ ಮಾಡಲಾಗಿತ್ತು ಎಂದು ದೂರಿದರು.
ಕೆಲ ಖಾಸಗಿ ಚಾನಲ್ ಗಳು ನನ್ನ ಬಗ್ಗೆ ಕೆಟ್ಟದಾಗಿ ತೋರಿಸುತ್ತಿದ್ದಾರೆ. ಆದರೆ ನನಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
H d revanna angry on media at hasana