ರಾಜಕೀಯ
ಸಚಿವ ರೇವಣ್ಣ ಕೀಳುಮಟ್ಟದ ಹೇಳಿಕೆಗೆ, ಸುಮಲತಾ ಅಂಬರೀಶ್ ಪ್ರತಿಕ್ರಿಯೆ ಹೀಗಿತ್ತು..!
ಸುದ್ದಿದಿನ ಡೆಸ್ಕ್ : ‘ಗಂಡಸತ್ತು ಇನ್ನು ಆರು ತಿಂಗಳು ಆಗಿಲ್ಲ, ಇವರಿಗೆ ರಾಜಕೀಯ ಯಾಕೆ ಬೇಕು’ ಎಂಬ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೇವಣ್ಣ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸುಮಲತ ‘ ಮಾತು ಅವರ ಸಂಸ್ಕೃತಿಯನ್ನ ತೋರಿಸುತ್ತೆ ಎಂದು ತುಂಬಾ ಕೂಲ್ ಆಗೇ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವಿದೆ. ಹೀಗಿರುವಾಗ ಸುಮಲತಾ ವಿರುದ್ಧ ಹೆಚ್.ಡಿ ರೇವಣ್ಣ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ನಾವ್ಯಾಕೆ ಮಾತನಾಡಬೇಕು ಅಂತಾ ಕಾಂಗ್ರೆಸ್ನಾಯಕರು ಅಂತರ ಕಾಯ್ದುಕೊಂಡಿದ್ದಾರೆ.
ಈ ಹಿಂದೆ ಸುಮಲತಾ ಅವರು ಅಂಬರೀಶ್ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು, ಹಾಗಾಗಿ ತಾನು ಕೈ ನಾಯಕರು ಹೇಳಿದಂತೆ ನಡೆದುಕೊಳ್ಳಬೇಕಾಗುತ್ತೆ ಅಂತಾ ಹೇಳಿದ್ದರು. ಅಲ್ಲದೇ, ಮಂಡ್ಯ ಕ್ಷೇತ್ರದಿಂದ ತನಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ನಾಯಕರನ್ನ ಒತ್ತಾಯಿಸಿದ್ದರು.
ಆದ್ರೆ, ಕಾಂಗ್ರೆಸ್ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ಗೆ ಬಿಟ್ಟುಕೊಡಲು ಮುಂದಾಗಿದೆ. ಈ ಹಿನ್ನೆಲೆ, ಹೆಚ್.ಡಿ ರೇವಣ್ಣ ನೀಡಿರುವ ಕೀಳುಮಟ್ಟದ ರಾಜಕೀಯ ಹೇಳಿಕೆಗೆ ಪ್ರತಿಕ್ರಿಯಿಸದೆ ಹಾಗೂ ಸುಮಲತಾ ಬೆನ್ನಿಗೆ ನಿಲ್ಲದೆ ಕೈ ನಾಯಕರು ದೂರವೇ ಉಳಿದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401