ದಿನದ ಸುದ್ದಿ
ಹದಡಿ | ದರೋಡೆಗೆ ಹೊಂಚು ಹಾಕಿದ್ದ ಓರ್ವ ಆರೋಪಿ ಸೆರೆ : ಮಾರಕಾಸ್ತ್ರಗಳು ವಶಕ್ಕೆ
ಸುದ್ದಿದಿನ,ದಾವಣಗೆರೆ: ದಾವಣಗೆರೆ – ಚನ್ನಗಿರಿ (Davangere – Channagiri ) ರಸ್ತೆಯ ಕೈದಾಳೆ ತಿರುವಿನಲ್ಲಿ ದರೋಡೆಗೆ ( Robbery ) ಹೊಂಚು ಹಾಕಿದ್ದ ಐವರು ಆರೋಪಿಗಳ ( Accused ) ಪೈಕಿ ಒಬ್ಬನನ್ನು ಹದಡಿ ಪೊಲೀಸರು ( Hadadi Police ) ಬಂಧಿಸಿದ್ದು (Arrest), ಆರೋಪಿಗಳಿಂದ 3.02 ಲಕ್ಷ ರೂಪಾಯಿ ನಗದು, ಕಾರು ಹಾಗೂ ಲಾಂಗ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಿಮ್ಲಾಪುರ ಕ್ಯಾಂಪ್ ನ ಸಾಧಿಕ್ ವುಲ್ತಾ ಅಲಿಯಾಸ್ ರಾಜೀಕ್ (23) ಬಂಧಿತ ಆರೋಪಿ. ಉಳಿದ ಆರೋಪಿಗಳು ಪರಾರಿಯಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೈದಾಳೆಕಡೆ ಹೋಗುವ ರಸ್ತೆಯ ಸಮೀಪ ಇನೋವಾ ಕಾರಿನ ಬಳಿ ನಿಂತಿದ್ದಾಗ ಪೊಲೀಸರು ಸಾಧಿಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆಗೆ ಸ್ಕೆಚ್ ಹಾಕುತಿದ್ದದ್ದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯು 2 ಜಾನುವಾರು ಕಳ್ಳತನ, ಬಿಳಚೋಡು ವ್ಯಾಪ್ತಿಯಲ್ಲಿ 2, ಮಾಯಕೊಂಡದಲ್ಲಿ 1 ಪ್ರಕರಣ ಸೇರಿ 5 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಹಣದ ಜೊತೆಗೆ ಲೈಲ್ಯಾಂಡ್, ಇನ್ನೋವಾ ಕಾರು, ಲಾಂಗ್, ಮಚ್ಚು, ಕಬ್ಬಿಣದ ಸಲಾಕೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ | ದೇವರಾಜ ಅರಸು ಕೊಟ್ಟ ಕಾಣಿಕೆ ಇತಿಹಾಸದ ಪುಟಗಳಲ್ಲಿ ಮರೆಯಲಾಗದ್ದು : ಸಿ.ಎಂ. ಬಸವರಾಜ ಬೊಮ್ಮಾಯಿ
ಗ್ರಾಮಾಂತರ ಉಪವಿಭಾಗದ ಎಎಸ್ಪಿ ಕನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಮಾಯಕೊಂಡ ಸರ್ಕಲ್ ಇನ್ ಸ್ಪೆಕ್ಟರ್ ತಿಮ್ಮಣ್ಣ ನೇತೃತ್ವದಲ್ಲಿ ಹದಡಿ ಪಿಎಸ್ ಐ ಸಂಜೀವ್ ಕುಮಾರ್, ಎಎಸ್ಐ ಯಾಸೀನ್ ವುಲ್ಲಾ, ಎಎಸ್ಐ ಕರಿಬಸಪ್ಪ, ನಾಗರಾಜಯ್ಯ, ತಿಮ್ಮಪ್ಪ, ಸೈಯದ್ ಗಫಾರ್, ಸಿದ್ದಪ್ಪ, ಅಣ್ಣಪ್ಪ, ನಾಗೇಶ್, ಲೋಕನಾಯ್ಕ, ಸಿದ್ದೇಶ್, ಶಶಿ, ಅರುಣ್ ಕುಮಾರ್, ಚನ್ನಕೇಶವ, ರೇವಣಸಿದ್ಧಪ್ಪ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದ ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಸಿ. ಬಿ. ರಿಷ್ಯಂತ್, ಎಎಸ್ಪಿ ಆರ್. ಬಿ. ಬಸರಗಿ ಅವರು ಶ್ಲಾಘಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243