ದಿನದ ಸುದ್ದಿ
ಹೆಚ್‌ಎಎಲ್‌ನಲ್ಲಿಂದು ಧೃವ್ ನಾಗರಿಕ ಹೆಲಿಕಾಫ್ಟರ್ ಹಾರಾಟಕ್ಕೆ ಚಾಲನೆ
ಸುದ್ದಿದಿನ,ಬೆಂಗಳೂರು:ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಬೆಂಗಳೂರಿನಲ್ಲಿಂದು ಹೆಚ್.ಎ.ಎಲ್. ಹೆಲಿಕಾಫ್ಟರ್ ವಿಭಾಗದಲ್ಲಿ ಧೃವ್ ಎನ್‌ಜಿ ನಾಗರಿಕ ಹೆಲಿಕಾಪ್ಟರ್ ಪ್ರಥಮ ಹಾರಾಟಕ್ಕೆ ಚಾಲನೆ ನೀಡಿದರು.
ಈ ಹೆಲಿಕಾಫ್ಟರ್‌ನ ಸ್ವದೇಶಿ ಇಂಜಿನ್ ಶಕ್ತಿಗೆ ಇಂದು ನಾಗರಿಕ ವಿಮಾನಯಾನದ ಪ್ರಧಾನ ವ್ಯವಸ್ಥಾಪಕರಿಂದ ಪ್ರಮಾಣ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಹೆಚ್‌ಎಎಲ್ ನಾಗರಿಕ ವಿಮಾನಯಾನ ಉತ್ಪಾದನಾ ವಲಯಕ್ಕೆ ಕಾಲಿಡುತ್ತಿರುವುದು ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.
ಧೃವ್ ಹೆಲಿಕಾಫ್ಟರ್‌ನ ನಾಗರಿಕ ರೂಪಾಂತರವು ನಾಗರಿಕರಿಗೆ ದೇಶೀಯ ಹೆಲಿಕಾಫ್ಟರ್ ಹಾರಾಟದ ಅವಕಾಶ ಕಲ್ಪಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243