ದಿನದ ಸುದ್ದಿ
ಹಂಪಿಯಲ್ಲಿ ಎಂಟು ಐತಿಹಾಸಿಕ ಬಾವಿಗಳು ಪತ್ತೆ
ಸುದ್ದಿದಿನ ಡೆಸ್ಕ್ : ಕಳೆದ ವಾರ ಸುರಿದ ಮಳೆಯಿಂದಾಗಿ ಕರ್ನಾಟಕದ ವಿಜಯನಗರ ಜಿಲ್ಲೆಯ ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಎಂಟು ಪುರಾತನ ಬಾವಿಗಳು ಪತ್ತೆಯಾಗಿವೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.
ಶ್ರೀ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿನ ಸಾಲುಮಂಟಪಗಳ ಕೆಲವು ಭಾಗ ಕುಸಿದಿದ್ದು, ಈಗ ಅವುಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಅದರಲ್ಲಿ ಒಂದು ಬಾವಿಯ ಮಣ್ಣನ್ನು ತೆರವುಗೊಳಿಸಿದಾಗ ನೀರು ಕಾಣಿಸಿಕೊಂಡಿದೆ. ಉಳಿದ ಬಾವಿಗಳ ಮಣ್ಣು ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಹಂಪಿ ಸಹಾಯಕ ಸಂರಕ್ಷಣಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
ಪುರಾತತ್ವ ಇಲಾಖೆಯು ಕಳೆದ 15 ದಿನಗಳಲ್ಲಿ ಒಟ್ಟು ಎಂಟು ಬಾವಿಗಳನ್ನು ಪತ್ತೆ ಮಾಡಿದೆ. ಬಾವಿಗಳ ಕುರಿತು ಸಮಗ್ರ ಅಧ್ಯಯನ ನಡೆಯಬೇಕಿದ್ದು ಇನ್ನಷ್ಟು ಸ್ಮಾರಕಗಳು ದೊರೆಯುವ ಸಾಧ್ಯತೆಗಳೂ ಇದೆ ಎಂದು ಪುರಾತತ್ವ ಇಲಾಖೆಯ ಎಎಸ್‌ಐ ಡಾ. ನಿಹಿಲ್ ದಾಸ್ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243