ದಿನದ ಸುದ್ದಿ

ಹಣಕಾಸು ವ್ಯವಹಾರ ರಹಿತ ದಿನ

Published

on

ಸುದ್ದಿದಿನ,ದಾವಣಗೆರೆ : ನೂತನ ದಾವಣಗೆರೆ ಅಂಚೆ ವಿಭಾಗವು ಅಧಿಕೃತವಾಗಿ ಮೇ.01 ರಂದು ಆರಂಭವಾಗಿದ್ದು, ಅಂಚೆ ವಿಭಾಗದಲ್ಲಿ ಬರುವ ಎಲ್ಲಾ ಅಂಚೆ ಕಚೇರಿ ಮತ್ತು ಶಾಖಾ ಅಂಚೆ ಕಚೇರಿಗಳಿಗೆ ಹೊಸ ಪ್ರಾಫಿಟ್ ಸೆಂಟರ್ಸ್ ಸಂಖ್ಯೆ ನೀಡುವ ಅಂತರ್ಜಾಲ ಪ್ರಕ್ರಿಯೆ ಮೇ.07 ಮತ್ತು ಮೇ.08 ಪ್ರಗತಿಯಲ್ಲಿರುವುದರಿಂದ, ಮೇ.07 ರಂದು “ಹಣಕಾಸು ವ್ಯವಹಾರ ರಹಿತ ದಿನ”ವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಗೌರವಾನ್ವಿತ ಅಂಚೆ ಗ್ರಾಹಕರು ಹಾಗೂ ನಾಗರೀಕರು ಸಹಕರಿಸಬೇಕೆಂದು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕರಾದ ಓ.ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version