ದಿನದ ಸುದ್ದಿ

ರಾಮದುರ್ಗ : ಕೈಮಗ್ಗ ನೇಕಾರರ ಪ್ರತಿಭಟನೆ

Published

on

ಸುದ್ದಿದಿನ ಡೆಸ್ಕ್ : ಕಳೆದ ಒಂದು ತಿಂಗಳುಗಳಿಂದ ತಮ್ಮಗೆ ನೇಯಲು ಕಚ್ಚಾ ಮಾಲು ಪೊರೈಕೆ ಯಾಗಿಲ್ಲವೆಂದು ಆಗ್ರಹಿಸಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ನೇಕಾರರು ಕೆಲಕಾಲ ಕೆ.ಎಚ್.ಡಿ.ಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆದಿದೆ.

ಘಟನೆ ಹಿನ್ನೆಲೆ

ಕೈಮಗ್ಗ ನೇಕಾರರು ತಮ್ಮ ಮನವಿಯನ್ನು ಸಲ್ಲಿಸಲು ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ಹೋದಾಗ, ತಮ್ಮ ಮನವಿಯನ್ನು ತಾಲೂಕಾ ಅಧಿಕಾರಿಗಳಿಗೆ ನೀಡಬೇಕೆಂಬ ಮಹದಾಸೇಯಿಂದ, ತಾಲೂಕಾ ಅಧಿಕಾರಿಗಳನ್ನು ಕರೆಸುವಂತೆ ಶಿವಪೇಠ ಕೆ.ಎಚ್.ಡಿ.ಸಿ ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು. ಶಿವಪೇಠ ಶಾಖೆಯ ಅಧಿಕಾರಿ ಮಾಟುರವರು ತಾಲೂಕಾ ಅಧಿಕಾರಿ ಜವಾಹರ ಹುಬ್ಬಳ್ಳಿ ಅವರನ್ನು ಪೋನ್ ಮೂಲಕ ಸಂಪರ್ಕಿಸಿದಾಗ ಅವರು ಆಫೀಸನ್ನು ಮುಚ್ಚಿಕೊಂಡು ಬರುವಂತೆ ಹೇಳಿದ್ದರ ಹಿನ್ನೆಲೆಯಲ್ಲಿ ಅದಕ್ಕೆ ಬೆಸತ್ತ ನೇಕಾರರು ದಿಢೀರ್‍ನೆ ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ಕಚೇರಿಯ ಸೆಟರ್ಸ ಎಳೆದು ಕೆಲಕಾಲ ಪ್ರತಿಭಟನೆ ಮಾಡಿದರು.

ಈ ಸುದ್ದಿ ತಿಳಿದ ತಕ್ಷಣವೇ ಸುರೇಬಾನ ಪೊಲೀಸ್ ಉಪ ಠಾಣೆಯ ಹವಾಲ್ದಾರ ಬಿ.ಕೆ.ರಂಗಣ್ಣವರ ಪ್ರತಿಭಟನೆ ನಡೆಸಿದ ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ನೇಕಾರರತ್ತ ಆಗಮಿಸಿ, ಕೆ.ಎಚ್.ಡಿ.ಸಿ ಹಿರಿಯ ಅಧಿಕಾರಿಗಳೊಂಗಿ ಚರ್ಚಿಸಿ, ನಿಮ್ಮ ಸಮಸ್ಯೆಯನ್ನು ನಾಳೆ ಮಂಗಳವಾರ ಬಗೆಹರಿಸುವುದಾಗಿ ನಿಮ್ಮ ರಾಮದುರ್ಗ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ತಾವು ತಮ್ಮ ಈ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ವಿನಂತಿಸಿದಾಗ ನೇಕರರು ತಮ್ಮ ಮನವಿಯನ್ನು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಶಿವಪೇಠ ಕೆ.ಎಚ್.ಡಿ.ಸಿ ಅಧಿಕಾರಿಗಳಿಗೆ ಸಲ್ಲಿಸಿದರು.

ನಮ್ಮ ಈ ಸಮಸ್ಯೆ ನಾಳೆ ಬಗೆಹರಿಯದಿದ್ದರೆ ತಮ್ಮ ಕಚೇರಿಯ ಮುಂದೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸುರೇಬಾನ ಪೊಲೀಸ್ ಉಪ ಠಾಣೆಯ ಹವಾಲ್ದಾರ ಬಿ.ಕೆ.ರಂಗಣ್ಣವರ ಅವರಿಗೆ ಎಚ್ಚರಿದರು.

ಈ ಪ್ರತಿಭಟನೆಯಲ್ಲಿ ಕೈಮಗ್ಗ ನೇಕಾರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಗಣಮುಖಿ, ನಾಗಪ್ಪ ದೇವನಾಳ, ಬಸಪ್ಪ ಕೊಣ್ಣೂರ, ಮಲ್ಲಪ್ಪ ಕಾತರಕಿ, ಬಸಪ್ಪ ಇಟಗಿ, ಶಂಕ್ರಪ್ಪ ದೇವನಾಳ, ಈರತಯ್ಯ ಹಿರೇಮಠ, ಈರಪ್ಪ ದೇವನಾಳ, ಸಿದ್ದಪ್ಪ ಕೊಣ್ಣೂರ, ಈರಪ್ಪ ಗಣಮುಖಿ, ಈರಪ್ಪ ಬಿಳಗಿ, ಶಂಕ್ರಪ್ಪ ಗೌಡರ, ಮಾಗುಂಡಪ್ಪ ಆಲೂರ, ಶಂಕ್ರಪ್ಪ ಚನ್ನಪ್ಪನವರ, ಜಗಧೀಶ ಗಣಮುಖಿ ಮತ್ತಿತರರು ಇದ್ದರು.

ಒಂದುವಾರದಲ್ಲಿ ನೇಕಾರರ ಇಗಿರುವ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನೇ ನಾಳೆ ಮಂಗಳವಾರ ಖುದ್ದಾಗಿ ಬೆಟಿನೀಡಿ ಕೈಮಗ್ಗ ನೇಕಾರರ ಸಮಸ್ಯೆಯನ್ನು ಆಲಿಸುತ್ತೇನೆ ಎಂದು ಕೆ.ಎಚ್.ಡಿ.ಸಿ ರಾಮದುರ್ಗ ತಾಲೂಕ್ ಅಧಿಕಾರಿ ಭರವಸೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version