ದಿನದ ಸುದ್ದಿ

ಹನುಮಾನ್ ಜಯಂತಿ; ಗುಜರಾತ್‌ನಲ್ಲಿ 108 ಅಡಿ ಎತ್ತರದ ಹನುಮಾನ್ ವಿಗ್ರಹ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ

Published

on

ಸುದ್ದಿದಿನ ಡೆಸ್ಕ್: ಹನುಮಾನ್ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೊರ್ಬಿಯಲ್ಲಿ ನಿರ್ಮಿಸಲಾಗಿರುವ 108ಅಡಿ ಎತ್ತರದ ಹನುಮಾನ್ ವಿಗ್ರಹವನ್ನು ಇಂದು ಅನಾವರಣ ಮಾಡಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ನಡೆಯಲಿದ್ದು, ಪ್ರತಿಮೆ ಅನಾವರಣದ ನಂತರ ಪ್ರಧಾನಮಂತ್ರಿ ಭಾಷಣ ಮಾಡಲಿದ್ದಾರೆ. ಹನುಮಾನ್ ಚಾರ್‌ಧಾಮ್ ಯೋಜನೆಯಡಿ ದೇಶದ 4 ದಿಕ್ಕುಗಳಲ್ಲಿ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಮೊರ್ಬಿ ಹನುಮಾನ್ ಪ್ರತಿಮೆ ಈ ಸರಣಿಯಲ್ಲಿ ಎರಡನೆಯದ್ದಾಗಿದೆ.

ಮೊರ್ಬಿಯ ಬಾಪು ಕೇಶವಾನಂದ ಆಶ್ರಮ ಆವರಣದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಸರಣಿಯ ಪ್ರಥಮ ಪ್ರತಿಮೆಯನ್ನು 2010 ರಲ್ಲಿ ಶಿಮ್ಲಾದಲ್ಲಿ ಅನಾವರಣ ಮಾಡಲಾಗಿತ್ತು. ದಕ್ಷಿಣ ದಿಕ್ಕಿನ ರಾಮೇಶ್ವರದಲ್ಲಿ ಹನುಮಾನ್ ಪ್ರತಿಮೆ ನಿರ್ಮಾಣ ಕಾರ್ಯ ಅರಂಭಗೊಂಡಿದೆ.

ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version