ದಿನದ ಸುದ್ದಿ

ಹನುಮಾನ್ ಚಾರ್ಧಾಮ್ ಯೋಜನೆಯಡಿ ದೇಶದ 4 ದಿಕ್ಕುಗಳಲ್ಲಿ ಹನುಮಂತನ ಪ್ರತಿಮೆ ನಿರ್ಮಾಣ : ಪ್ರಧಾನಮಂತ್ರಿ ನರೇಂದ್ರ ಮೋದಿ

Published

on

ಸುದ್ದಿದಿನ ಡೆಸ್ಕ್ : ಹನುಮಾನ್ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಮೊರ್ಬಿಯಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಪ್ರಧಾನಮಂತ್ರಿ, ಹನುಮಾನ್ ಚಾರ್ಧಾಮ್ ಯೋಜನೆಯಡಿ ದೇಶದ 4 ದಿಕ್ಕುಗಳಲ್ಲಿ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಮೊರ್ಬಿ ಹನುಮಾನ್ ಪ್ರತಿಮೆ ಈ ಸರಣಿಯಲ್ಲಿ ಎರಡನೆಯದ್ದಾಗಿದೆ. ಮೊರ್ಬಿಯ ಬಾಪು ಕೇಶವಾನಂದ ಆಶ್ರಮ ಆವರಣದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ.

ಸರಣಿಯ ಪ್ರಥಮ ಪ್ರತಿಮೆಯನ್ನು 2010 ರಲ್ಲಿ ಶಿಮ್ಲಾದಲ್ಲಿ ಅನಾವರಣ ಮಾಡಲಾಗಿತ್ತು. ದಕ್ಷಿಣ ದಿಕ್ಕಿನ ರಾಮೇಶ್ವರದಲ್ಲಿ ಹನುಮಾನ್ ಪ್ರತಿಮೆ ನಿರ್ಮಾಣ ಕಾರ್ಯ ಅರಂಭಗೊಂಡಿದೆ ಎಂದರು.

ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version