ದಿನದ ಸುದ್ದಿ

ಹಂಪರಗುಂದಿ ದಂಪತಿಗಳಿಗೆ ಸನ್ಮಾನ

Published

on

  • ವರದಿ : ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ

ಸುದ್ದಿದಿನ,ಮಸ್ಕಿ : ಕರ್ನಾಟಕ ರಾಜ್ಯ ಶಾಮಿಯಾನ, ಡೆಕೋರೆಟರ್ಸ, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ 4 ನೇ ವರ್ಷದ ರಾಜ್ಯಮಟ್ಟದ ರಾಯಚೂರು ಉತ್ಸವ ಸಮ್ಮೇಳನವು ರಾಯಲ್ ಫಂಕ್ಷನ್ ಹಾಲ್ ನಲ್ಲಿ ನೆಡೆಯಿತು.

ಈ ಕಾರ್ಯಕ್ರಮದಲ್ಲಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಹಲವಾರು ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಶಾಮಿಯಾನ ಸಂಘವು ಶೃತಿ ರಾಮಣ್ಣ ಹಂಪರಗುಂದಿ ದಂಪತಿಗಳಿಗೆ ಸನ್ಮಾನಿಸಲಾಯಿತು.

ಪರಮಪೂಜ್ಯ ಶಾಂತಮಲ್ಲಾ ಶಿವಾಚಾರ್ಯರು ಮಾತನಾಡಿ ಅಭಿನಂದನ್ ಸಂಸ್ಥೆಯ ಹಲವಾರು ಸಾಮಾಜಿಕ ಸೇವೆಗಳ ಬಗ್ಗೆ ನಾವು ಕೇಳಿದ್ದೇವೆ ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮವಾಗಿ ಅವರ ಸೇವೆಗಳನ್ನು ಗಮನಿಸುತ್ತಿದ್ದೇವೆ ದಂಪತಿಗಳು ಸೇರಿ ಸಮಾಜದಲ್ಲಿ ನೊಂದ, ಬೆಂದ, ಅನಾಥ ಹಾಗೂ ಬಡ ಮಕ್ಕಳಿಗೆ ಊಟ ವಸತಿ ಸಹಿತ ಶಿಕ್ಷಣ ನೀಡುತ್ತಿರುವುದು ಪುಣ್ಯದ ಕಾರ್ಯವೆಂದು ಹೇಳಿದರು.

ಓಂ ಶಾಂತಿಯ ಸ್ಮಿತಾ ಅಕ್ಕನವರು ಇಂತಹ ದಂಪತಿಗಳು ಆಧುನಿಕ ಸಮಾಜದಲ್ಲಿ ತುಂಬಾನೆ ಅವಶ್ಯಕ ಎಂದು ಹೇಳುವುದರ ಜೊತೆಗೆ ಸಮಾಜ ಸೇವೆ ನಮ್ಮ ಬದುಕಿ ಎಂದು ಈ ದಂಪತಿಗಳು ನೂರಾರು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಹಾಗೂ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವಲ್ಲಿ ಈ ಸಂಸ್ಥೆಯ ಪಾತ್ರ ಶ್ಲಾಘನೀಯವಾಗಿದೆ ಎಂದರು. ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ತಾಲೂಕು ಅಧ್ಯಕ್ಷರು ಇದೇ ತರ ಸಮಾಜ ಸೇವೆ ಮಾಡುವವರಿಗೆ ಇಂಥ ಸನ್ಮಾನಗಳು ದೊರಕಬೇಕೆಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶಾಮಿಯಾನ ಸಂಘದ ರಾಜ್ಯಾಧ್ಯಕ್ಷ ಎಂ ಲಕ್ಷ್ಮಣ್, ಉಪಾಧ್ಯಕ್ಷ ಶ್ರೀಧರ ಕಿರಿಗಿ ಹಾಗೂ ರಾಜ್ಯ ಹಾಗೂ ಜಿಲ್ಲಾಮಟ್ಟದ ಶಾಮಿಯಾನ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version