ಸಿನಿ ಸುದ್ದಿ
HaPpY BiRtHdAy | ಕಿಚ್ಚನ ಮುಖಕ್ಕೆ ಕೇಕ್ ಹಚ್ಚಿ ಸಂಭ್ರಮಿಸಿದ ಪತ್ನಿ ಪ್ರಿಯಾ..! ವಿಡಿಯೋ ನೋಡಿ
ಸುದ್ದಿದಿನ ವಿಶೇಷ : ಕಿಚ್ಚಾ ಸುದೀಪ್ ಗಿಂದು ಹುಟ್ಟುಹಬ್ಬದ ಸಂಭ್ರಮ. 45 ನೇ ವಸಂತಕ್ಕೆ ಕಾಲಿಟ್ಟಿರೊ ಸುದೀಪ್ ಜನಮಾನಸದಲ್ಲಿ ಉಳಿದ ಕಲಾವಿದ. ಹುಟ್ಟುಹಬ್ಬಕ್ಕೆ ನಿನ್ನೆ ತಡರಾತ್ರಿಯಿಂದಲೇ ಜೆಪಿ ನಗರದ ಬಳಿ ಇರೊ ಕಿಚ್ಚನ ಮನೆಗೆ ಆಗಮಿಸಿದ್ದರು ಅಭಿಮಾನಿಗಳು. ಹಾಗೆಯೇ ಕಿಚ್ಚನ ಕುಟುಂಬದವರೆಲ್ಲ ಸೇರಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು.
ಅಭಿಮಾನಿಗಳ ಸಂಭ್ರಮ
ಇಂದು ಕೂಡ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ರಾಜ್ಯದ ನಾನಾ ಭಾಗದಿಂದ ಬಸ್ಸು ,ಕಾರುಗಳ ಮೂಲಕ ದಂಡೊಪಾದಿಯಾಗಿ ಬಂದಿದ್ಧರು. ಯಾವುದೇ ರೀತಿಯ ಹೂವು ಕೇಕ್ ,ಗಿಫ್ಟ್ ಗಳನ್ನ ತರದೇ ಫ್ಯಾನ್ಸ್ ಬಂದಿದ್ದರು
ಯಾವುದೇ ರೀತಿ ಉಡುಗೊರೆ ಬೇಡ ಎಂದು ಸುದೀಪ್ ಮನವಿ ಮಾಡಿಕೊಂಡಿದ್ದ ಸುದೀಪ್ ಮಾತನಂತೆ ನಡೆದು ಕೊಂಡರು. ಕಿಚ್ಚನಿಗೆ ವಿಶ್ ಮಾಡಲು ಸಾಲುಗಟ್ಟಿ ನಿಂತು ಕಿಚ್ಚಾ ಕಿಚ್ಚಾ ಎಂದು ಅಭಿನಾನಿಗಳು ಹರ್ಷೊದ್ಘಾರ ವ್ಯಕ್ತ ಪಡಿಸಿದರು.
ಕೋಟಿಗೊಬ್ಬ3, ಪೈಲ್ವಾನ್ ಟೀಸರ್ ಹಾಗೂ ಪೋಸ್ಟರ್ ರಿಲೀಸ್
ಬರ್ತ್ ಡೇ ಸಲುವಾಗಿ ಪೈಲ್ವಾನ್ ಹಾಗೂ ಕೋಟಿಗೊಬ್ಬ 3 ಚಿತ್ರ ತಂಡದಿಂದ ಬರ್ತ್ ಡೇ ಸ್ಪೆಷಲ್ ಟೀಸರ್ ಹಾಗೂ ಸೈರಾ ಸಿನಿಮಾದಿಂದ ಮೋಷನ್ ಪೊಸ್ಟರ್ ಬಿಡುಗಡೆ ಮಾಡಲಾಯ್ತು ಅಂಬಿನಿಂಗೆ ವಯಸ್ಸಾಯ್ತು ಚಿತ್ರತಂಡದಿಂದ ಸುದೀಪ್ ನ್ಯೂ ಲುಕ್, ಗಿಫ್ಟ್ ಕೊಡಲಾಯ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401