ದಿನದ ಸುದ್ದಿ

ಪ್ರೀತಿಸಿ ಮದುವೆಯಾಗಿದ್ದಕ್ಕೆ ‘ಮೂತ್ರ ಕುಡಿಸಿ, ಅರೆ ಬೆತ್ತಲೆ ‘ ಮಾಡಿದರು..!

Published

on

ಸುದ್ದಿದಿನ ಡೆಸ್ಕ್ | ಪ್ರೀತಿಸಿ ಮದುವೆ ಆದ ಹೆಣ್ಣು ಮಗಳಿಗೆ ಕಠೋರ ಶಿಕ್ಷೆ ಗುರಿಪಡಿಸಲಾಗುತ್ತಿದೆ ಎಂದರೆ ಇದು ಈ ಕಾಲಘಟ್ಟದ ದುರಂತವೇ ಸರಿ. ಈ ದುರಂತ ಕತೆಯನ್ನು ಈಗ ನೀವು ಓದಿದರೆ ತಿಳಿಯುತ್ತದೆ.

ಪ್ರೀತಿಸಿ ಮದುವೆಯಾಗಿ ಮನೆತನ ಗೌರವ ತೆಗೆದರು ಎಂಬ ಕಾರಣಕ್ಕೆ ಮಧ್ಯ ಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ಪ್ರೇಮ ವಿವಾಹ ಮಾಡಿಕೊಂಡ ದಂಪತಿಗೆ ಮೂತ್ರ ಕುಡಿಯುವಂತೆ ಒತ್ತಾಯ ಹೇರಿದ್ದಾರೆ ಎಂದು ಅಂಬುವಾ ಪೊಲೀಸ್ ಠಾಣೆಯ ಅಧಿಕಾರಿ ವಿಕಾಸ ಕಪಿಸ್ ತಿಳಿಸಿದ್ದಾರೆ.

ಅಲಿರಾಜಪುರ ಜಿಲ್ಲೆಯ ಹರದಾಸಪುರ ಗ್ರಾಮದಲ್ಲಿ 19 ವರ್ಷದ ಯುವತಿ ಅದೇ ಗ್ರಾಮದ 21 ವರ್ಷದ ಯುವಕ ಪರಸ್ಪರ ಪ್ರೀತಿಸಿ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮೇನಲ್ಲಿ ಮದುವೆಯಾಗಿದ್ದರು. ಜಾತ್ ಪಂಚಾಯತ್ (ಸಮುದಾಯದ ಮುಖಂಡರ ಸಮಿತಿ) ಮಧ್ಯೆ ಪ್ರವೇಶಿಸಿ ಯುವಕನ ಕಡೆ ಕುಟುಂಬದವರು 70,000 ರೂ.ಗಳನ್ನು ಯುವತಿಯ ಕುಟುಂಬಕ್ಕೆ ನೀಡುವಂತೆ ಆದೇಶಿಸಿ ಸಮಸ್ಯೆ ಬಗೆಹರಿಸಿದ್ದರು.

ಇದಾದ ನಂತರ ದಂಪತಿ ಉದ್ಯೋಗ ಅರಸಿ ಗುಜರಾತಿಗೆ ಹೋಗಿದ್ದರು. ಕಳೆದ ವಾರದ ಗ್ರಾಮಕ್ಕೆ ಮರಳಿ ಯುವಕನ ಸಂಬಂಧಿ ಮನೆಯಲ್ಲಿ ಉಳಿದುಕೊಂಡಿದ್ದರು. ಜುಲೈ 25ರಂದು ಬೆಳಗ್ಗೆ 4ಕ್ಕೆ ಯುವತಿ ಕಡೆಯವರು ಆಗಮಿಸಿ ಬಂದೂಕು ಹಿಡಿದು ತಮ್ಮೊಂದಿಗೆ ಬರುವಂತೆ ಬೆದರಿಕೆ ಒಡ್ಡಿ, ಕಂಬಕ್ಕೆ ಕಟ್ಟಿ ಯುವಕನನ್ನು ಹೊಡೆದಿದ್ದಾರೆ. ಅಲ್ಲದೇ ಯುವತಿಯನ್ನು ಅರೆಬೆತ್ತಲೆ ಮಾಡಿ ತಲೆಬೋಳಿಸಿ ಮನಬಂದಂತೆ ಥಳಿಸಿದ್ದಾರೆ. ನಂತರ ಬಲವಂತವಾಗಿ ಆಕೆಗೆ ಮೂತ್ರ ಕುಡಿಸಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆತನದ ಗೌರವಕ್ಕೆ ಧಕ್ಕೆ ತಂದಿದ್ದ ದ್ವೇಷಕ್ಕೆ ರಿವೆಂಜ್ ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ನಂತರ ದಂಪತಿ ಪೊಲೀಸರನ್ನು ಭೇಟಿ ಮಾಡಿ ಯುವತಿ ತಂದೆ, ಆಕೆಯ ಇಬ್ಬರು ಚಿಕಪ್ಪಂದಿರು, ಮತ್ತು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರನ್ನು ಬಂಧಿಸಿದ್ದು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಎಸ್ಪಿ ವಿಫುಲ್ ಶ್ರೀವತ್ಸವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9996715401

Leave a Reply

Your email address will not be published. Required fields are marked *

Trending

Exit mobile version