ದಿನದ ಸುದ್ದಿ

ಹಾರ್ದಿಕ್ ಪಟೇಲ್ ಬಂಧನ; ಬಿಡುಗಡೆಗೆ ಆಗ್ರಹ

Published

on

ಸುದ್ದಿದಿನ ಡೆಸ್ಕ್: ಗುಜರಾತಿನಲ್ಲಿ ಭಾನುವಾರ ಉಪವಾಸ ಸತ್ಯಾಗ್ರಹ ನಡೆಸಲಿ ಮುಂದಾಗಿದ್ದ ಪಟೇದಾರ್ ಅನಾಮತ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ನೇತೃತ್ವದ ನೂರಕ್ಕೂ ಅಧಿಕ ಜನ ಕಾರ್ಯಕರ್ತರನ್ನು ಬಂಧಿಸಲಾಯಿತು. ಪಟೇದಾರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಆಗಸ್ಟ್ 25ರಂದು ಪ್ರತಿಭಟನೆ ನಡೆಸಲು ಅವಕಾಶ ನೀಡದ ಕಾರಣಕ್ಕೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.

ಪ್ರತಿಭಟನೆ ನಡೆಸಲು ಹಾರ್ದಿಕ್ ಪಟೇಲ್ ಅನುಮತಿ ಪಡೆದುಕೊಂಡಿರಲಿಲ್ಲ. ಅಹಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಆತ ಕಾರಿನೊಳಗೆ ಉಪವಾಸ ಕೈಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧನ‌ ಮಾಡಿದಕ್ಕೆ ಸೂರತ್, ರಾಜಕೋಟ್ ಸೇರ ಗುಜರಾತಿನ ವಿವಿಧೆಡೆ ಪಾಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

 

Leave a Reply

Your email address will not be published. Required fields are marked *

Trending

Exit mobile version