ದಿನದ ಸುದ್ದಿ

ಸಹಭಾಗಿತ್ವ ಸೇವಾಮನೋಭಾವದಿಂದ ಸಂಸ್ಥೆಯ ಅಭಿವೃದ್ಧಿ ಸಾಧ್ಯ : ಪ್ರಾಂಶುಪಾಲ ಡಾ.ರಮೇಶ್.ಎಂ.ಎನ್

Published

on

ಸುದ್ದಿದಿನ,ಹರಿಹರ:ನೌಕರರ ನಿಸ್ವಾರ್ಥತೆ, ಸಹಭಾಗಿತ್ವ ಹಾಗೂ ಅನ್ಯೋನ್ಯತೆಯ ಸೇವೆಯ ಮನೋಭಾವದಿಂದ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧೀಕ್ಷಕರಾದ ವೀರಭದ್ರಯ್ಯ.ಆರ್.ಎಂ ಅವರ ವಯೋನಿವೃತ್ತಿ ಪ್ರಯುಕ್ತ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಸರ್ವರ ಏಳ್ಗೆಗಾಗಿ ಕಾರ್ಯನಿರ್ವಹಿಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಸಹೋಗ್ಯೋಗಿಗಳ ನಡುವೆ ಸಮನ್ವಯತೆ ಪ್ರಮುಖವಾದದ್ದು, ಈ ಹಿನ್ನೆಲೆಯಲ್ಲಿ ಅಧೀಕ್ಷಕರಾದ ವೀರಭದ್ರಯ್ಯ ಅವರ ಕರ್ತವ್ಯ ಎಲ್ಲರಿಗೂ ಅನುಕರಣೀಯ ಎಂದು ಅವರ ಸುಧೀರ್ಘ ಸೇವೆಯನ್ನು ನೆನೆದರು.

ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಕುಮಾರ್.ಎಂ ಅವರು ಮಾತನಾಡಿ, ಅಧೀಕ್ಷಕರಾದ ವೀರಭದ್ರಯ್ಯ ಅವರ 38 ವರ್ಷಗಳ ವೃತ್ತಿಯಲ್ಲಿ ಎಲ್ಲೂ ಕಳಂಕವನ್ನು ಪಡೆಯದೆ ಶುದ್ಧ ಅಸ್ತರಾಗಿ ವೃತ್ತಿ ನಿಷ್ಠೆ, ಪ್ರಮಾಣಿಕತೆ, ಕರ್ತವ್ಯ ಮತ್ತು ಸಮಯ ಪ್ರಜ್ಞೆ ಹೊಂದಿದ್ದರು. ಮಿತ ಭಾಷಿಕರಾದ ಶ್ರೀಯುತರು ನಮ್ಮ ಕಾಲೇಜಿನಲ್ಲೇ ವೃತ್ತಿ ಜೀವನದ ಭಾಗಶಃ ಭಾಗವನ್ನು ಕಳೆದಿದ್ದು, ಅವರ ಸೇವೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಈ ಸಮಯದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ.ಬಿ.ಕೆ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ.ಹೆಚ್, ರಾಜ್ಯಶಾಸ್ತ್ರ ಅಧ್ಯಾಪಕರಾದ ಕಳಕಪ್ಪ ಚೌರಿ, ಪ್ರಥಮ ದರ್ಜಿ ಸಹಾಯಕರಾದ ರವೀಂದ್ರನಾಥ್.ಬಿ.ಜೆ ಅವರುಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಾಲೇಜಿನ ಎಲ್ಲರೂ ಸಿಬ್ಬಂದಿಯವರು ಅಧೀಕ್ಷಕರಾದ ವೀರಭದ್ರಯ್ಯ.ಆರ್.ಎಂ ಅವರನ್ನು ಸನ್ಮಾನಿಸಿದರು.

ವಿದ್ಯಾರ್ಥಿನಿ ಕು.ಆಷ್ಲೇಷಾ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗೌರಮ್ಮ.ಎಸ್.ಎಂ ಅವರು ವಯೋನಿವೃತ್ತಿ ಹೊಂದುತ್ತಿರುವ ವೀರಭದ್ರಯ್ಯ ಅವರನ್ನು ಪರಿಚಯಿಸಿ, ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜು ಅವರು ಅವರು ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version